
ಪ್ರಗತಿವಾಹಿನಿ ಸುದ್ದಿ: ಬ್ಯಾಂಕ್ ದರೋಡೆಗೆ ಬಂದಿದ್ದ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ದರೋಡೆ ಗ್ಯಾಂಗ್ ಹಾಗೂ ಪೊಲೀಸ್ ನಡುವೆ ದೊಡ್ಡ ಘರ್ಷಣೆ ನಡೆದಿದ್ದು ಓರ್ವ ನ ಕಾಲಿಗೆ ಪೈರಿಂಗ್ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಘಟ್ಟ ಕ್ರಾಸ್ ಬಳಿ ಘಟನೆ ನಡೆದಿದ್ದು ಘಟನೆಯಲ್ಲಿ ಓರ್ವ ಪೊಲೀಸ್ ಕಾನ್ಸ್ ಸ್ಟೇಬಲ್ ಮೇಲೆ ಮಚ್ಚಿನಿಂದ ಗ್ಯಾಂಗ್ ದಾಳಿ ಮಾಡಿದೆ. ಜೀವ ರಕ್ಷಣೆಗಾಗಿ ಪೊಲೀಸರಿಂದ ಫೈರಿಂಗ್ ನಡೆದಿದೆ. ನ್ಯಾಮತಿಯ ಎಸ್ ಬಿಐ ಬ್ಯಾಂಕ್ ದರೋಡೆಗೆ ಎರಡು ಕಾರ್ ನಲ್ಲಿ ಎಂಟು ಜನರ ಗ್ಯಾಂಗ್ ಬಂದಿತ್ತು ಎನ್ನಲಾಗಿದೆ. ಇನ್ನು ಗಾಯಾಳು ಪೊಲೀಸ್ ಕಾನ್ಸ್ ಸ್ಟೇಬಲ್ ಹಾಗೂ ಪೊಲೀಸ್ ಗುಂಡಿಗೆ ಗಾಯಗೊಂಡ ದರೋಡೆ ಗ್ಯಾಂಗ್ ಸದಸ್ಯನಿಗೆ ನ್ಯಾಮತಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರ ಪ್ರದೇಶ ಮೂಲದ ದರೋಡೆ ಗ್ಯಾಂಗ್, ಎರಡು ಕಾರ್ ನಲ್ಲಿ ಆಗಮಿಸಿತ್ತು ಎನ್ನಲಾಗಿದೆ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ಮಾಹಿತಿ ಸಂಗ್ರಹ ಮಾಡಿದ್ದಾರೆ.