Belagavi NewsBelgaum NewsKannada NewsKarnataka News
*ಭಕ್ತರ ಗಮನಕ್ಕೆ: ಶ್ರೀಶೈಲಂನಲ್ಲಿ ಸ್ಪರ್ಷ ದರ್ಶನಕ್ಕೆ ಅವಕಾಶವಿಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಕ್ಷೇತ್ರ ಶ್ರೀಶೈಲಂನಲ್ಲಿ ಮಾ.16 ರಿಂದ 20ರ ವರೆಗೆ 5 ದಿನಗಳ ಕಾಲ ಯುಗಾದಿ ಮಹೋತ್ಸವದ ಆಚರಣೆ ಜರುಗಲಿದ್ದು, ಶ್ರೀ ಕ್ಷೇತ್ರದಲ್ಲಿ ಮಾ.16ರಿಂದ 20 ರವರೆಗೆ ಸ್ವಾಮಿಯವರ ಅಲಂಕಾರಿಕ ದರ್ಶನಕ್ಕೆ ಮಾತ್ರ ವ್ಯವಸ್ಥೆಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಭಗವಂತನ ಸ್ಪರ್ಷ ದರ್ಶನಕ್ಕೆ ಅವಕಾಶವಿರುವುದಿಲ್ಲವೆಂದು ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




