ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಪ್ರಸ್ತುತ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ವಿದ್ಯುತ್ ಮಗ್ಗ ನೇಕಾರರು ಸಹ ಸಂಕಷ್ಟದಲ್ಲಿರುವುದರಿಂದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ರೂ.೨,೦೦೦/- ಗಳ ಪರಿಹಾರಧನವನ್ನು ನೇರವಾಗಿ ಕಾರ್ಮಿಕರ ಆಧಾರ್ ಲಿಂಕ್ಸ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬಾಕಿ ಇರುವ ನೇಕಾರರು/ಮಾಲೀಕರು ದಿನಾಂಕ:೨೦-೦೮-೨೦೨೦ ರ ಒಳಗಾಗಿ ಆಯಾ ಊರುಗಳಲ್ಲಿ ಈಗಾಗಲೇ ನಿಗದಿಪಡಿಸಿದ ಸ್ಥಳಗಳಲ್ಲಿ ಸಲ್ಲಿಸಬಹುದು ಅಥವಾ ಈ ಕಚೇರಿಗೆ ನೇರವಾಗಿ ಸಂಪರ್ಕಿಸಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ದಿನಾಂಕ: ೨೦-೦೮-೨೦೨೦ ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.
ಈಗಾಗಲೇ ಅರ್ಜಿ ಸಲ್ಲಿಸಿರುವ ನೇಕಾರರು ಹಾಗೂ ಇನ್ನು ಮುಂದೆ ಅರ್ಜಿ ಸಲ್ಲಿಸುವ ನೇಕಾರರು ತಮ್ಮ ಆಧಾರ ಸಂಖ್ಯೆ ತಮ್ಮ ಬ್ಯಾಂಕಿನ ಖಾತೆಗಳಿಗೆ ಲಿಂಕ್ ಆಗಿರುವುದನ್ನು ಹಾಗೂ ಖಾತೆ ಚಾಲ್ತಿಯಲ್ಲಿರುವುದನ್ನು ಕೂಡಲೇ ಖಾತ್ರಿಪಡಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: ೦೮೩೧-೨೯೫೦೬೭೪ ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಸಲ್ಲಿಕೆಗೆ ಆ.೧೭ ಕಡೆಯ ದಿನ
ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿದೋದ್ದೇಶ ಸಹಕಾರಿ ಸಂಘಗಳು, ಕೈಗಾರಿಕಾ ಸಹಕಾರಿ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ಧ ಸಹಕಾರಿ ಸಂಘ/ ಸೌಹಾರ್ಧ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಪಡೆದು ದಿನಾಂಕ: ೦೧-೦೧-೨೦೧೯ ರಿಂದ ೩೧-೦೩-೨೦೧೯ರ ಅವಧಿಯೊಳಗೆ ಪಾವತಿಸಿದಂತಃ ನೇಕಾರರಿಗೂ ಸಹ ರೂ.೧.೦೦ ಲಕ್ಷಗಳ ವರೆಗಿನ (ಅಸಲು ಮತ್ತು ಬಡ್ಡಿ ಸೇರಿ) ಸಾಲಮನ್ನಾ ಯೋಜನೆಯನ್ನು ವಿಸ್ತರಿಸಿ ಅವರುಗಳು ಪಾವತಿ ಮಾಡಿದಂತಹ ಸಾಲದ ಮೊತ್ತವನ್ನು ಮರುಪಾವತಿಸಲು ಆದೇಶ ಹೊರಡಿಸಲಾಗಿದೆ.
ಅದರಂತೆ ಈಗಾಗಲೇ ಯೂಸರ್ ಐ.ಡಿ ಮತ್ತು ಪಾಸ್‌ವರ್ಡ ಹೊಂದಿರುವ ಸಹಕಾರ ಸಂಘ | ಬ್ಯಾಂಕುಗಳು ತಮ್ಮ ಸಾಲಗಾರರ ಮಾಹಿತಿಯನ್ನು ಸಾಲಮನ್ನಾ ವೆಬ್ ಸೈಟ್ www.karnatakasainikwelfare.com ರಲ್ಲಿ ಭರ್ತಿ ಮಾಡಲು ದಿನಾಂಕ: ೧೭-೦೮-೨೦೨೦ ಕೊನೆಯ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, “ಸಾಮರ್ಥ್ಯ ಸೌಧ”
ಅನಗೋಳ ಮುಖ್ಯ ರಸ್ತೆ, ಬೆಳಗಾವಿ ಇವರ ಕಛೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ