Belagavi NewsBelgaum NewsKannada NewsKarnataka NewsNational
*ಪ್ರಯಾಣಿಕರ ಗಮನಕ್ಕೆ:ಮೀರಜ್- ಕ್ಯಾಸಲ್ ರಾಕ್ ನಡುವಿನ ಈ ಎರಡು ರೈಲು ರದ್ದು*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದ ನಡುವೆ ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ, ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.
1. ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್ ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ 31.10.2025 ರವರೆಗೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೋಂಡಾದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
2. ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ ಎಕ್ಸ್ ಪ್ರೆಸ್ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ 31.10.2025 ರವರೆಗೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೋಂಡಾದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.