Latest

ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್  ಹುದ್ದೆಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ: ನವದೆಹಲಿ; ಭಾರತೀಯ ನೌಕಾಪಡೆಯು ಟ್ರೇಡ್ಸ್‌ಮ್ಯಾನ್  ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಂಸ್ಥೆಯಲ್ಲಿ 1,531 ಖಾಲಿ ಹುದ್ದೆಗಳಿದ್ದು ಆಸಕ್ತರು ಅರ್ಹರು ಅರ್ಜಿ ಹಾಕಬಹುದಾಗಿದೆ.

ಅಭ್ಯರ್ಥಿಗಳು 10 ನೇ ತೇರ್ಗಡೆಯಾಗಿರಬೇಕು ಮತ್ತು ಇಂಗ್ಲಿಷ್ ಜ್ಞಾನವನ್ನು ಹೊಂದಿರಬೇಕು. ಅವರು  ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸೂಕ್ತ ತಾಂತ್ರಿಕ ಶಾಖೆಯಲ್ಲಿ ಎರಡು ವರ್ಷಗಳ ನಿಯಮಿತ ಸೇವೆಯೊಂದಿಗೆ ಮೆಕ್ಯಾನಿಕ್ ಅಥವಾ ಯಾವುದೇ ಸಮಾನ ಹುದ್ದೆಯಾಗಿ ಸೇವೆ ಸಲ್ಲಿಸಬೇಕು.

Home add -Advt

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ, ಮತ್ತು  ಗರಿಷ್ಠ 25 ವರ್ಷಗಳು. ಅರ್ಜಿ ತುಂಬಲು ಕೊನೆಯ ದಿನಾಂಕ ; ಮಾರ್ಚ್ 31, 2022. ನೌಕಾಪಡೆಯ ಅಧಿಕೃತ ವೆಬ್‌ಸೈಟ್- joinindiannavy.gov.in ನಲ್ಲಿ ನೇಮಕಾತಿ ಡ್ರೈವ್‌ಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ Rs 19,900-Rs 63,200 ವೇತನ ಇರುತ್ತದೆ.

Related Articles

Back to top button