Kannada NewsKarnataka NewsNationalPolitics

*ಶಾಸಕ ಚಂದ್ರು ಲಮಾಣಿ ಕೇಸ್ ನಲ್ಲಿ ಆಡಿಯೋ ಹಲ್ ಚಲ್: ಮಾತಾಡಿದ್ದು ನಾನೆ ಎಂದ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು 5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಚಾರವಾಗಿ ಮಹತ್ವದ ಅಪ್ಡೇಟ್ ದೋರೆತಿದೆ. 

ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಅವರ ಹೊರಬಂದಿರುವ ಆಡಿಯೋ ಕ್ಲಿಪ್ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

 ಆಡಿಯೋದಲ್ಲಿ ಮಾತನಾಡಿದ್ದು ನಾನು ಎಂಬುದು ಸತ್ಯ ಆದರೆ ಲೋಕಾಯುಕ್ತ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮಾತನಾಡಿಲ್ಲ ಎಂದು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಜಗಳದ ಸಮಯದಲ್ಲಿ ಶಾಸಕರು ಒತ್ತಡ ನೀಡಿದ್ದರಿಂದ ಸಿಟ್ಟಿನಲ್ಲಿ ಕೆಲವು ಮಾತುಗಳು ಬಂದಿವೆ. ಆದರೆ ಪ್ರಕರಣಕ್ಕೆ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ನಾನು ಈ ವಿಚಾರದಲ್ಲಿ ಭಾಗಿಯಾಗಿದ್ದೇನೆ ಎಂದು ಯಾರಾದರೂ ಹೇಳಿದರೆ ನನ್ನ ಎರಡೂ ಮೊಬೈಲ್‌ಗಳನ್ನು ಪರಿಶೀಲಿಸಬಹುದು ಎಂದು ಸ್ವಾಮಿಜಿಗಳು ತಿಳಿಸಿದ್ದಾರೆ.‌

Home add -Advt

Related Articles

Back to top button