Kannada NewsKarnataka News

ಸಿದ್ದರಾಮಯ್ಯ ಸ್ಪರ್ಧೆ ಕುರಿತು ಗೋವಿಂದ ಕಾರಜೋಳ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸ್ಪರ್ಧಿಸಲು ಯಾವ ಕ್ಷೇತ್ರವೂ ಸಿಗುವುದಿಲ್ಲ. ಅವರು ಎಲ್ಲಿಂದ ಸ್ಪರ್ಧೆ ನಡೆಸಿದರೂ ಸೋಲುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡುವುದು ಸ್ವಾಭಾವಿಕ.   ಕೋಲಾರದಿಂದ‌ ಸ್ಪರ್ಧೆ ಮಾಡಿದರೂ ಅವರು ಸೋಲುವುದು ನಿಶ್ಚಿತ ಎಂದರು.

ಕಾಂಗ್ರೆಸ್ ‌ಪಕ್ಷ ಮುಳುಗುವ ಹಡಗು. ದೇಶದಲ್ಲಿ ಕಾಂಗ್ರೆಸ್ ಗೆ ನೆಲೆ ಇಲ್ಲದಂತಾಗಿದೆ. ಕಾಂಗ್ರೆಸ್ ಮನಸ್ಥಿತಿಗೆ ಘಟಾನುಘಟಿ ನಾಯಕರೇ ಪಕ್ಷ ತೊರೆದಿದ್ದಾರೆ. ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ‘ಹಿಂದೂ’ ಪದ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ  ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

Home add -Advt

ಮರಾಠಿ ಕಿರುತೆರೆ ನಟಿ ಕಲ್ಯಾಣಿ ಕುರಾಳೆ- ಜಾಧವ ರಸ್ತೆ ಅಪಘಾತದಲ್ಲಿ ಸಾವು

Related Articles

Back to top button