Latest

*ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ; ಸಚಿವ ಅಶ್ವತ್ಥನಾರಾಯಣ ಯೂಟರ್ನ್; ಚಂಡು ಆದಿಚುಂಚನಗಿರಿ ಅಂಗಳಕ್ಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ವಿಚಾರ ಜೋರಾಗಿದ್ದು, ಬೆಳ್ಳಿ ತೆರೆಯ ಮೇಲೆ ಸಿನಿಮಾ ಕಥೆ ಹೇಳಲು ಕೇಸರಿ ಪಡೆ ಸಜ್ಜಾಗಿದೆ. ಮೇ 18ರಂದು ಸಿನಿಮಾ ಮುಹೂರ್ತ ಎಂದು ಹೇಳಲಾಗಿದ್ದು, ಈ ಸಿನಿಮಾಗಾಗಿ ಸಚಿವ ಶ್ವತ್ಥನಾರಾಯಣ ಕಥೆ, ಚಿತ್ರಕಥೆ ಬರೆಯುತ್ತಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ಸಿನಿಮಾ ವಿಚಾರ ಸಚಿವರಲ್ಲೇ ಗೊಂದಲಕ್ಕೆ ಕಾರಣವಾಗಿದೆ. ಉರಿಗೌಡ, ನಂಜೇಗೌಡ ಸಿನಿಮಾಕ್ಕೆ ಸಚಿವ ಮುನಿರತ್ನ ವೃಷಭಾದ್ರಿ ಪ್ರೊಡೆಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕೆ ಸಚಿವ ಅಶ್ವತ್ಥನಾರಾಯಣ ಕಥೆ ಚಿತ್ರಕಥೆ ಮಾಡುತ್ತಿರುವುದಾಗಿ ಹೇಳಲಾಗಿತ್ತು. ಆದರೆ ಸಚಿವ ಅಶ್ವತ್ಥನಾರಾಯಣ ಯೂಟರ್ನ್ ಹೊಡೆದಿದ್ದು, ಸಿನಿಮಾದಲ್ಲಿ ನನ್ನ ಪಾತ್ರ ಇಲ್ಲ ಎಂದಿದ್ದಾರೆ.

ಸಿನಿಮಾ ವಿಚಾರವಾಗಿ ನನ್ನ ಪಾತ್ರವಿಲ್ಲ, ಅದಕ್ಕೆ ನಾನು ಕಥೆ, ಚಿತ್ರಕಥೆ ಬರೆಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಸಿನಿಮಾ ವಿಚಾರ ಈಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಅಂಗಳ ತಲುಪಿದ್ದು, ಇಂದು ಸಚಿವ ಮುನಿರತ್ನ ಆದಿಚುಂಚನಗಿರಿ ಶ್ರೀ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

Home add -Advt

Related Articles

Back to top button