
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗೊಂಧಳಿ ಗಲ್ಲಿಯ ಆಟೋ ಚಾಲಕರ ಸಂಘದಿಂದ ವಿವೇಕಾನಂದ ಜಯಂತಿ ಆಚರಿಸಲಾಯಿತು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಿಂತ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಜವಾಗಿಯೂ ಖುಷಿ ಎನಿಸುತ್ತದೆ. ನೀವು ಹೃದಯದಿಂದ ಕಾರ್ಯಕ್ರಮ ಮಾಡುತ್ತೀರಿ. ಪ್ರೀತಿಯಿಂದ ನಮ್ಮನ್ನು ಆಹ್ವಾನಿಸುತ್ತೀರಿ. ನಿಮ್ಮ ಜೊತೆ ಬೆರೆತು, ನಿಮ್ಮ ಸಮಸ್ಯೆ, ಅನುಭವ ಕೇಳುವುದೇ ಒಂದು ಸುದೈವ ಎಂದೂ ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ