*ರಾಮ ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ; ಅಕ್ಷತೆ ತಲುಪಿಸುವ ಅಭಿಯಾನಕ್ಕೆ ಚಾಲನೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಬಾಲ ರಾಮವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ರಾಮ ಮಂದಿರ ಮಂತ್ರಾಕ್ಷತೆ ಮನೆ ಮನೆಗೂ ತಲಿಪಿಸುವ ನಿಟ್ಟಿನಲ್ಲಿ ಬೆಳಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ಗಣಪತಿ ಮಂದಿರದಲ್ಲಿ ಅಕ್ಷತೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮಹಿಳೆಯರು, ಪರಿವಾರದ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಉಪಸ್ತಿಯೊಂದಿಗೆ ಚೆನ್ನಮ್ಮ ಸರ್ಕಲ್ ಗಣಪತಿ ಮಂದಿರದಲ್ಲಿ ಮನೆ ಮನೆಗೆ ಅಕ್ಷತ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ ಜನೇವರಿ 15ರ ತನಕ ಈ ಅಭಿಯಾನ ನಡೆಯಲಿದೆ.
ಪೂಜ್ಯ ಶಿವಸಿದ್ದ ಸೋಮೇಶ್ವರ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲರ ಮನಸ್ಸಿನ ಭಕ್ತಿ ಭಾವದ ಪ್ರತೀಕ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠೆ ಆಗುತ್ತಾ ಇರುವದು ಭಾರತದ ಜನಮಾನಸದ ಹೆಮ್ಮೆಯ ಪ್ರತೀಕ.ಪ್ರತಿ ರಾಮಭಕ್ತರು ಇದರಲ್ಲಿ ಪಾಲ್ಗೊಂಡು ಭಾರತದ ಆಧ್ಯಾತ್ಮ ಇತಿಹಾಸ ಜಗತ್ತಿಗೆ ಪ್ರಸರಿಸಲಿ ಎಂದು ಆಶೀರ್ವಾದಿಸುತ್ತ ನೂರಾರು ಹೋರಾಟ ಮಾಡಿ ಹಿಂದು ಸಂಸ್ಕೃತಿ ಉಳಿಸುವ ವಿಶ್ವ ಹಿಂದುಪರಿಷತ್ತ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವಂತೆ ಕರೆ ಕೊಟ್ಟರು.
ರಾಘವೇಂದ್ರ ಕಾಗವಾಡ ಆರ ಎಸ್ ಎಸ್ ಪ್ರಾಂತ ಕಾರ್ಯವಾಹ, ಜೇಠಾ ಬಾಯಿ ಪಟೇಲ, ಡಾ ಸುಭಾಷ ಪಾಟೀಲ, ಸಂತೋಷ ವಾದ್ವಾ, ರಾಜೇಶ್ವರೀ ಸಂಬರಗೀಮಠ, ಕೃಷ್ಣಾ ಭಟ್ ಪ್ರಾಂತ ವಿಶ್ವ ಹಿಂದುಪರಿಷತ್ತ ಕೋಶಾಧ್ಯಕ್ಷ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ