ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಯುರ್ವೇದ ತಜ್ಞ ಹಾಗೂ ಬೆಳಗಾವಿಯ ಅತ್ರಿವರದ್ ಮಲ್ಟಿಸ್ಪೆಷಾಲಿಟಿ ಕೇಂದ್ರದ ನಿರ್ದೇಶಕ ಡಾ.ರೂಪೇಶ್ ಸಾಳುಂಕೆ ಅವರಿಗೆ ಗೋವಾದ ಭಾಸ್ಕರ ಭೂಷಣ ಸಂಸ್ಥೆಯ ವತಿಯಿಂದ ಪ್ರೇರಣಾ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಗಳನ್ನು ಗೋವಾದ ಮಡಗಾಂವ್ ನ ರವೀಂದ್ರ ಭವನ ಸಂಸ್ಥೆಯ ಸಭಾಂಗಣದಲ್ಲಿ ಈ ಜರುಗಿದ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು.
ಡಾ.ರೂಪೇಶ ಸಾಳುಂಕೆಯವರು ಆಯುರ್ವೇದದ ಮೂಲಕ ಜನಸಾಮಾನ್ಯರಿಗೆ ನೀಡಿದ ಉತ್ತಮ ಆರೋಗ್ಯದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಅವರು ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು.
ಡಾ. ರೂಪೇಶ ಸಾಳುಂಕೆಯವರು ಸಾಂಗ್ಲಿ ಜಿಲ್ಲೆಯ ಮಾಧವನಗರದಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ಸಾಂಗ್ಲಿಯ ವಸಂತ ದಾದಾ ಪಾಟೀಲ್ ಆಯುರ್ವೇದ ಕಾಲೇಜಿನಿಂದ ಆಯುರ್ವೇದಾಚಾರ್ಯ ಬಿರುದು ಪಡೆದರು. ಪುಣೆಯ ಧನಕವಾಡಿಯ ಭಾರತಿ ವಿದ್ಯಾಪೀಠ ಆಯುರ್ವೇದ ಕಾಲೇಜಿನಲ್ಲಿ 2004 ರಲ್ಲಿ ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಳಗಾವಿಯ ಕಂಕಣವಾಡಿ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸೇವಾವಧಿಯಲ್ಲ ಸಾರ್ವಜನಿಕರಿಗೆ ಶುದ್ಧ ಆಯುರ್ವೇದ ಔಷಧವನ್ನು ಕೊಂಡೊಯ್ಯಲು ಶಾಸ್ತ್ರಶುದ್ಧ ಆಯುರ್ವೇದ ಮೆಡಿಸಿನ್ ಅನ್ನು 2005 ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಿದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಒಂದು ಲಕ್ಷಕ್ಕೂ ಹೆಚ್ಚು ರೋಗಿಗಳು ಸೇವೆಯ ಪ್ರಯೋಜನ ಪಡೆದಿದ್ದಾರೆ.
9 ಹುದ್ದೆಗಳು ಬೆಂಗಳೂರಿನಿಂದ ಸ್ಥಳಾಂತರ; ಸುವರ್ಣ ವಿಧಾನಸೌಧಕ್ಕೆ ಒಂದೂ ಇಲ್ಲ !
https://pragati.taskdun.com/9-posts-shifted-from-bangalore-suvarna-vidhana-soudha-has-none/
*ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ನೇರಪ್ರಸಾರ*
https://pragati.taskdun.com/final-darshan-of-walking-god-siddeshwar-swamiji-live/
*ಕಾರು ಡಿಕ್ಕಿ ಹೊಡೆಸಿ ದಂಪತಿಯ ಕೊಲೆಗೆ ಯತ್ನ; ಮಹಿಳೆ ಸಾವು*
https://pragati.taskdun.com/mandyamurdercar-accidentland-issue/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ