Kannada NewsKarnataka NewsLatest

ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಇಲ್ಲಿಯ ವ್ಯಾಕ್ಸಿನ್ ಡಿಪೋದಲ್ಲಿ ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ  ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರಸ್ಥಾಪನೆಗೆ ರಾಜ್ಯ ಸರಕಾರಿ ಅನುಮೋದನೆ ನೀಡಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ನಗರದ ಲಸಿಕಾ ಸಂಸ್ಥೆ ಸುಮಾರು ೪೫೬ ತರಹದ ವಿವಿಧ ಗಿಡಮೂಲಿಕೆಗಳನ್ನು ಹೊಂದಿರುವ ಏಕೈಕವಾದ ವಿಶಿಷ್ಠ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರ ಸ್ಥಾಪಿಸುವುದು ಅತಿ ಅವಶ್ಯಕವಾಗಿದೆ. ಹಂತ ಹಂತವಾಗಿ ವಿಸ್ತರಣೆ ಮಾಡುವ ಉದ್ದೇಶದ ಯೋಜನೆಯ ಕಾಮಗಾರಿಗೆ ಒಟ್ಟು ೧೩.೩೫ ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ೧೦ ಕೋಟಿ ರೂಪಾಯಿಗಳ ಅನುದಾನವನ್ನು ಸರಕಾರವು ಮಂಜೂರು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಇದು ದೇಶದಲ್ಲಿಯೇ  ಸರಕಾರದಿಂದ ಮಾಡುತ್ತಿರುವ ಮೊದಲ ಘಟಕವಾಗಿದೆ. ಈ ಘಟಕದಲ್ಲಿ ಉತ್ಪನ್ನಗೊಳ್ಳುವ ಎಲ್ಲ ಬಗೆಯ ಔಷಧಿಗಳು ಹಾಗೂ ಪರಿಕರಗಳು ರಾಜ್ಯದ ಎಲ್ಲ ಆಯುಷ್ ಆರೋಗ್ಯ ಕೇಂದ್ರಗಳಿಗಳಿಗಷ್ಟೇ ಸರಬರಾಜುಗೊಳ್ಳದೇ ವಿದೇಶಗಳಿಗೂ ರಪ್ತುಗೊಳ್ಳುತ್ತವೆ.
ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಈ ಯೋಜನೆಯ ಔಷಧ ತಯಾರಿಕಾ ಘಟಕವು ಸ್ಥಾಪನೆಯಾಗುತ್ತಿದ್ದು ದೇಶದಲ್ಲಿಯೇ ಮಾದರಿಯನ್ನಾಗಿ ಮಾಡುವ ಉದ್ದೇಶವಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button