Latest

ಚೀನಾದ 40 ಯೋಧರು ಸಾವನ್ನಪ್ಪಿರುವ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸೇನೆಯ ಘರ್ಷಣೆ ವೇಳೆ ಚೀನಾದ 40 ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿರಬಹುದು ಎಂದು ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ತಿಳಿಸಿದ್ದಾರೆ.

ಸಂಘರ್ಷದಲ್ಲಿ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ ಚೀನಾ ದೇಶದವರಿಗೆ ಇದಕ್ಕಿಂತಲೂ ದುಪ್ಪಟ್ಟು ಪ್ರಮಾಣದ ಸೈನಿಕರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವ ವಿಕೆ ಸಿಂಗ್ ಹೇಳಿಕೆ ನೀಡಿದ್ದಾರೆ.

Home add -Advt

ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಪಿಎಲ್ ಎ ಸೈನಿಕರ ಸಾವಿನ ಬಗ್ಗೆ ಗೊಂದಲವಿದೆ. ಚೀನಾ ಸತ್ತವರ ಸಂಖ್ಯೆಯನ್ನು ಮುಚ್ಚಿಡುತ್ತಿದೆ. 1962ರ ಯುದ್ಧದ ಸಂದರ್ಭದಲ್ಲೂ ಇದೇ ರೀತಿ ಮಾಡಿತ್ತು. ಸಾವು ನೋವುಗಳನ್ನು ಅದು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

Related Articles

Back to top button