Latest

ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೃಷಿ ಸಚಿವ

ಪ್ರಗತಿವಾಹಿನಿ ಸುದ್ದಿ; ಕೊಡಗು: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಹೆಂಡತಿ-ಮಕ್ಕಳನ್ನು ಸಾಕಲಾಗದವ ಹೇಡಿಯಲ್ಲದೇ ಇನ್ನೇನು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ರೈತರ ಆತ್ಮಹತ್ಯೆಗೆ ನೀರಾವರಿ ಸಮಸ್ಯೆ ಕಾರಣವಲ್ಲ. ನೀರಾವರಿ ಸೌಲಭ್ಯವೇ ಇಲ್ಲದ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣ ಕಡಿಮೆಯಿದೆ. ರೈತರು ಆತ್ಮಹತ್ಯೆಯಂತಹ ಹೇಡಿತನದ ಮಾರ್ಗ ಅನುಸರಿಸಬಾರದು ಎಂದರು.

ಆತ್ಮಹತ್ಯೆ ಮಾಡಿಕೊಳ್ಳುವವನು ತನ್ನ ಹೆಂಡತಿ-ಮಕ್ಕಳ ಬಗ್ಗೆ ಯೋಚಿಸುವುದೇ ಇಲ್ಲ. ಮಹಿಳೆಯೊಬ್ಬಳು ತನ್ನ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ ರೈತರಿಗೆ ಮಾದರಿಯಾಗಿದದಳೆ. ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಆಕೆ ಉತ್ತರ ನೀಡಿದ್ದಾಳೆ ಹಾಗಾಗಿ ರೈತರು ಆತ್ಮಹತ್ಯೆಯಂತಹ ನಿರ್ಧಾರ ಮಾಡಬಾರದು. ಏನೆ ಸಮಸ್ಯೆಗಳಿದ್ದರೂ ಇಲ್ಲಿಯೇ ಇದ್ದು ಜಯಿಸಬೇಕು ಎಂದು ಹೇಳಿದರು.

Home add -Advt

Related Articles

Back to top button