Kannada NewsKarnataka NewsLatestPolitics

*ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಘಟನೆ ದೇವರಾಜ ಅರಸು ೧೦೮ನೇ ಜನ್ಮದಿನ ಕಾರ್ಯಕರಮದಲ್ಲಿ ನಡೆದಿದೆ.

ಮಾಜಿ ಸಿಎಂ ದಿ.ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಾವೆಲ್ಲ ದೇವರಾಜ ಅರಸು ಕಾಲದಲ್ಲಿ ಬಂದವರು, ನಾವು ವಿರೋಧಿ ಬಣದಲ್ಲಿದ್ದರೂ ಕರೆದು ಮಾತನಾಡಿಸುತ್ತಿದ್ರು. ವಿಪಕ್ಷದಲ್ಲಿದ್ದರೂ ನಿಮ್ಮನ್ನೆಲ್ಲ ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಈಗ ಕರೆದು ಮಾತನಾಡಿಸುವುದಿರಲಿ ಶತ್ರುಗಳಂತೆ ನೋಡ್ತಾರೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

Related Articles

ಕಾರ್ಯಕರ್ತರನ್ನು ರಕ್ಷಿಸದಿದ್ದರೆ ಮುಂದೆ ಪಕ್ಷಕ್ಕೆ ಸಂಕಷ್ಟವಾಗುತ್ತದೆ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.


Home add -Advt

Related Articles

Back to top button