*ನಾನು ಇವರಂತೆ ಬಣ್ಣಬದಲಿಸುವ ರಾಜಕೀಯ ಗೋಸಂಬೆ ಅಲ್ಲ; ಬಿಜೆಪಿ ಶಾಸಕರ ವಿರುದ್ಧ ಮತ್ತೆವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ವೇಶ್ಯೆಯರ ಮಾದರಿಯಲ್ಲಿ ತಮ್ಮ ಶಾಸಕರ ಸ್ಥಾನವನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಬಿಜೆಪಿಯವರ ಯಾವುದೇ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಲೈಂಗಿಕ ಕಾರ್ಯಕರ್ತರ ಬಗ್ಗೆ ನಮಗೆ ಗೌರವವಿದೆ. ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ಉಲ್ಲೇಖಿಸಿದ್ದಾರೆ ಎಂದರು.
ಸಚಿವ ಮುನಿರತ್ನ ಏನೆಂದು ನನಗೆ ಚೆನಾಗಿ ಗೊತ್ತಿದೆ. ಬಿಜೆಪಿಯ ಸಚಿವರೊಬ್ಬರು ಪಿಂಪ್ ಎಂಬ ಶಬ್ದ ಬಳಸುತ್ತಾರೆ. ಶಾಸಕ ಯತ್ನಾಳ್, ಕೆಲವರು ಸಪ್ಲೈ ಮಾಡಿ ಮಂತ್ರಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ಯಾವ ಗಂಡಸರೂ ಇಲ್ಲ.ಯಾರೊಬ್ಬರೂ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಧಮ್ ಇದ್ದರೆ, ತಾಕತ್ತಿದ್ದರೆ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕರು ನನ್ನನ್ನು ಹಿಂಬಾಗಿಲ ಮೂಲಕ ಬಂದವನು ಎನ್ನುತ್ತಾರೆ. ಇಂದಲ್ಲ ನಾಳೆ ಬಿಜೆಪಿಯವರಿಗೆ ಜನರು ಬುದ್ಧಿ ಕಲಿಸುತ್ತಾರೆ. ನಾನು ಹಿಂಬಾಗಿಲ ಮೂಲಕ ಬಂದವನಲ್ಲ, ರಾಜ ಮಾರ್ಗದ ಮೂಲಕವೇ ಬಂದವನು. ಇವರಂತೆ ಸಿ ಗ್ರೇಡ್ ಬಾಗಿಲಿಂದ ಬಂದವನಲ್ಲ. ಅಥವ ಇವರಂತೆ ಬಣ್ಣ ಬದಲಿಸುವ ರಾಜಕೀಯ ಗೋಸುಂಬೆಯೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
*ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಲಿದೆ; ಸರ್ಕಾರದಿಂದಲೇ ತಂತ್ರಾಂಶ ಸಿದ್ಧ; ಸಿಎಂ ಬೊಮ್ಮಾಯಿ*
https://pragati.taskdun.com/yuva-sambhashanecm-basavaraj-bommair-v-dental-collegebangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ