Kannada NewsKarnataka NewsLatestPolitics

*ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದು ಸ್ವಲ್ಪ ದಿನದಲ್ಲಿ ಗೊತ್ತಾಗುತ್ತೆ ಎಂದ ಡಾ.ಜಿ.ಪರಮೇಶ್ವರ್*

ಅಂದು ನಮಗೆ ಹೇಳುತ್ತಿದ್ದರು, ಇಂದು ಬಿಜೆಪಿ ಸ್ಥಿತಿ ಎಲ್ಲದಕ್ಕೂ ದೆಹಲಿ ಕಡೆ ನೋಡುವಂತಾಗಿದೆ ಎಂದು ಟಾಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ನ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರ‍ೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಗೆ ಟಾಂಗ್ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಷ್ಟರಲ್ಲಿಯೇ ಗೊತ್ತಾಗಲಿದೆ ಯಾರು ಯಾರ ಸಂಪರ್ಕದಲ್ಲಿದ್ದಾರೆ ಎಂಬುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಸ್ವಲ್ಪ ದಿನದಲ್ಲೇ ಎಲ್ಲವೂ ಗೊತ್ತಾಗಲಿದೆ. ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಎಂದು ತಿಳಿಯಲಿದೆ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಸಂವಿಧಾನಾತ್ಮಕವಾಗಿ ವಿಪಕ್ಷ ನಾಯಕ ಇರಬೇಕು. ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದಲೇ ಅವರ ಪಕ್ಷದ ಆಂತರಿಕ ವಿಚಾರ ಹೇಗಿದೆ ಎಂಬುದು ಗೊತ್ತಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಈ ರೀತಿ ಎಂದೂ ಆಗಿರಲಿಲ್ಲ. ಈ ಹಿಂದೆ ಬಿಜೆಪಿಯವರು ನಮಗೆ ಹೇಳುತ್ತಿದ್ದರು. ಕಾಂಗ್ರೆಸ್ ನವರು ಎಲ್ಲದಕ್ಕೂ ದೆಹಲಿ ಕಡೆ ನೋಡುತ್ತಿದ್ದಾರೆ ಎಂದು… ಈಗ ಬಿಜೆಪಿಯವರ ಸ್ಥಿತಿ ಎಲ್ಲದಕ್ಕೂ ದೆಹಲಿ ಕಡೆ ನೋಡುವಂತಾಗಿದೆ ಎಂದು ತಿರುಗೇಟು ನೀಡಿದರು.

Home add -Advt


Related Articles

Back to top button