Kannada NewsKarnataka NewsLatestPolitics

*ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ತಮ್ಮ ವಿರುದ್ಧದ ಪೋಕ್ಸೋ ಕೇಸ್ ನಡಿ ಎಫ್ ಐ ಆರ್ ದಾಖಲಾಗಿರುವ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್,ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಯಾರೋ ಹೆಣ್ಣುಮಗಳೊಬ್ಬಳು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಎಫ್ ಐ ಆರ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ತಿಂಗಳ ಹಿಂದೆ ತಾಯಿ-ಮಗಳು ನಮಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಕಣ್ಣೀರಿಡುತ್ತಾ ಬಂದಿದ್ದರು. ಮನೆ ಬಳಿ ಕಣ್ಣೀರಿಡುತ್ತ ನಿಂತ ತಾಯಿ-ಮಗಳನ್ನು ನಾನೆ ಕರೆದು ಸಮಸ್ಯೆ ಏನು? ಎಂದು ವಿಚಾರಿಸಿದ್ದೆ. ತಮಗೆ ಸಾಕಷ್ಟು ಅನ್ಯಾಯಗಳಾಗಿವೆ. ನ್ಯಾಯಕೊಡಿಸಿ ಎಂದು ಕೇಳಿದ್ದರು. ನಾನೇ ಕಮಿಷ್ನರ್ ಗೆ ಕರೆ ಮಾಡಿ ತಾಯಿ-ಮಗಳಿಗೆ ಅನ್ಯಾಯವಾಗಿದೆಯಂತೆ ನ್ಯಾಯಕೊಡಿಸುವಂತೆ ಹೇಳಿ ಕಮಿಷ್ನರ್ ಬಳಿ ಕಳುಹಿಸಿಕೊಟ್ಟಿದ್ದೆ. ಕಷ್ಟವಿದೆ ಎಂದಿದ್ದಕ್ಕೆ ಸ್ವಲ್ಪ ಹಣವನ್ನೂ ನೀಡಿದ್ದೆ. ಬಳಿಕ ಅವರು ನನ್ನ ವಿರುದ್ಧ ಏನೇನೋ ಮಾತನಾಡಲು ಶುರುಮಾಡಿದ್ದರು. ಏನಿದು ಉಪಕಾರ ಮಾಡಲು ಹೋದರೆ ಆರೋಪಿಸುತ್ತಿದ್ದಾರೆ ಇದರಲ್ಲಿ ಬೇರೆ ಉದ್ದೇಶವಿರಬಹುದು ಎಂದು ಎಚ್ಚೆತ್ತುಕೊಂಡೆ.

Home add -Advt

ಉಪಕಾರ ಮಾಡಲು ಹೋಗಿದ್ದಕ್ಕೆ ಈಗ ನನ್ನ ವಿರುದ್ಧವೇ ಇಂತಹ ಆರೋಪ ಮಾಡಿದ್ದಾರೆ. ಇರಲಿ ಎದುರಿಸೋಣ. ಈ ಬಗ್ಗೆ ಹೆಚ್ಚೇನು ಮಾತನಾಡಲ್ಲ ಎಂದರು. ಇದೇ ವೇಳೆ ರಾಜಕೀಯ ಆರೋಪವನ್ನು ಈ ವಿಚಾರದಲ್ಲಿ ಮಾಡಲ್ಲ. ನೋಡೋಣ ಎಂದು ಹೇಳಿದರು.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಡಿ ಸದಾಶಿವನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.


Related Articles

Back to top button