Belagavi NewsBelgaum News

*ಬಬಲಾದಿ ಸ್ವಾಮೀಜಿಯನ್ನು ಅರೆಸ್ಟ್ ಮಾಡಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಗಲಕೋಟೆಯ ಜಮಖಂಡಿಯ ಪ್ರಸಿದ್ದ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಸ್ವಾಮೀಜಿ ಅವರನ್ನು ಬಹುಕೋಟಿ ರೂಪಾಯಿ ವಂಚನೆ ಆರೋಪದಡಿ ಸಿಐಡಿ ಅಧಿಕಾರಿಗಳು ಇದೀಗ ಬಂಧಿಸಿದ್ದಾರೆ.

ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್‌ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಬಂಧಿಸಲಾಗಿದೆ. ಶ್ರೀಗಳಿಗೆ ಬ್ಯಾಂಕ್ ನಿಂದ ಕೆಲ ಅಧಿಕಾರಿಗಳೇ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು ಆ ಹಣದಲ್ಲಿ ಸ್ವಾಮೀಜಿ ಮನೆ ಕೂಡ ಕಟ್ಟಿಸಿಕೊಂಡಿದ್ದಾರೆಂಬ ಆರೋಪವಿದೆ.

ಸದಾಶಿವ ಸ್ವಾಮೀಜಿ ಅವರನ್ನು ಶಹರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದ್ದು ಇನ್ನೇನು ಸ್ವಾಮೀಜಿ ಅವರನ್ನು ಕೋರ್ಟ್‌ ಹಾಜರುಪಡಿಸುವ ಸಾಧ್ಯತೆ ಇದೆ. ಕಾಲಜ್ಞಾನಿ ನುಡಿಯುವಲ್ಲಿ ಸ್ವಾಮೀಜಿ ಪ್ರಖ್ಯಾತಿ ಪಡೆದಿದ್ದರು ಎಂಬ ಮಾತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರೂ.60 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ ಎನ್ನಲಾಗುತ್ತಿದೆ.

Home add -Advt

Related Articles

Back to top button