Karnataka NewsLatest

*ಜಿಲ್ಲಾಸ್ಪತ್ರೆಯಿಂದಲೇ ಒಂದು ದಿನದ ಮಗುವನ್ನು ಕದ್ದು ಪರಾರಿಯಾದ ಕಳ್ಳಿ*

ಪ್ರಗತಿವಾಹಿನಿ ಸುದ್ದಿ: ಇದೆಂತಹ ಘಟನೆ. ಜಿಲ್ಲಾಸ್ಪತ್ರೆಯಲ್ಲಿ ತಾಯಿಯ ಮಡಿಲಲ್ಲಿದ್ದ ಮಗುವನ್ನೇ ಕಳ್ಳಿ ಎತ್ತಿಕೊಂಡು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ತಾನು ನರ್ಸ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ಮಗುವನ್ನು ಕೊಡಿ ಕಫ ತೆಗೆಯುತ್ತೇನೆ ಎಂದು ಎತ್ತಿಕೊಂಡವಳು ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ.

ಒಂದು ದಿನದ ಹೆಣ್ಣುಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿದ್ದಾಳೆ. ಮಾಬೂಬಿ (30) ಎಂಬುವವರ ಮಗುವನ್ನು ಮಹಿಳೆ ಕದ್ದು ಪರಾರಿಯಾಗಿದ್ದು, ಹೆತ್ತ ತಾಯಿ ಹಾಗೂ ಕುಟುಂಬದವರು ಕಂಗಾಲಾಗಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button