
ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ ಮಾಡಿ ಆಕೆಯ ತಲೆಯನ್ನೇ ಬೋಳಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸಪ್ಪ ಎಂಬಾತ ತನ್ನ ಸ್ನೇಹಿತ ಸದಾಶಿವ ನ್ಯಾಮಗೌಡನ ಜೊತೆ ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿ ಶ್ರೀದೇವಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಆಕೆಯ ಅರ್ಧತಲೆ ಬೋಳಿಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾದ ಪತ್ನಿ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿದಿನ ಪತಿ ಬಸಪ್ಪ ಕುಡಿದು ಬಂದು ಜಗಳವಾದಿ, ಹಿಂಸಿಸುತ್ತಿದ. ಪತಿಯ ಕಾಟನ್ನೆ ನೊಂದು ಕೆಲದಿನಗಳ ಕಾಲ ತವರಿಗೆ ಹೋಗಿದ್ದೆ. ಎರಡು ತಿಂಗಳ ಹಿಂದೆ ಮನೆಗೆ ವಾಪಸ್ ಆಗಿದ್ದೆ. ಕೆಲ ದಿನ ಸುಮ್ಮನಿದ್ದ ಪತಿ ಮತ್ತೆ ಕುಡಿದು ಹಿಂಸಿಸತೊಡಗಿದ್ದಾನೆ. ನಿನ್ನೆ ರತರಿ ತನ್ನ ಸ್ನೇಹಿತನ ಜೊತೆ ಕುಡಿದು ಬಂದು ಗಲಾಟೆ ಮಾಡಿ, ಹೊಡೆದಿದ್ದಲ್ಲದೇ ತಲೆಬೋಳಿಸಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.
ಪತಿ ಬಸಪ್ಪನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.