Latest

ಫೋನಲ್ಲಿ ಮಾತಾಡ್ತಾ ಬೈಕ್ ಚಾಲನೆ; ಹಂಪ್ ನಲ್ಲಿ ಬೈಕ್ ನಿಂದ ಬಿದ್ದ ಪತ್ನಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಯೋಧನೊಬ್ಬ ಫೋನಲ್ಲಿ ಮಾತನಾಡುತ್ತ ಬೈಕ್ ಓಡಿಸುತ್ತಿದ್ದ ವೇಳೆ ರಸ್ತೆ ಹಂಪ್ ನಲ್ಲಿ ಜಂಪ್ ಆದ ಪರಿಣಾಮ ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಪತ್ನಿ ಬಿದ್ದು ಮೃತಪಟ್ಟಿರುವ ಘಟನೆ ಬಾಗಲಕೋಟೆ ಮೂಗನೂರು ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆ ಪುಷ್ಪಲತಾ (35). ಈಕೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ವಿಭೂತಿ ಶೇಖರಯ್ಯ ಅವರ ಪತ್ನಿ. ಯೋಧ ಊರಿಗೆಂದು ಬಂದಿದ್ದಾಗ ಈ ಘಟನೆ ನಡೆದಿದೆ.

ಪತ್ನಿಯನ್ನು ತವರುಮನೆಗೆ ಕರೆದುಕೊಂಡು ಹೋಗುವಾಗ, ಮಗ ವಿಡಿಯೋ ಕಾಲ್ ಮಾಡಿದ್ದಾನೆ. ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಯೋಧ ಬೈಕ್ ಚಲಾಯಿಸಿದ್ದಾನೆ. ರಸೆಯಲ್ಲಿ ಹೋಗುವಾಗ ಹಂಪ್ ಬಂದಿದೆ. ಒಮ್ಮೆಲೇ ಗೊತ್ತಾಗದೇ ಬೈಕ್ ಹಂಪ್ ನಲ್ಲಿ ಜಂಪ್ ಆಗಿದೆ. ಹಿಂದೆ ಕುಳಿತಿದ್ದ ಪುಷ್ಪಲತಾ ಆಯತಪ್ಪಿ ಕೆಳಗೆಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button