Kannada NewsKarnataka NewsLatest

*ಬಿಜೆಪಿ ಕಾರ್ಯಕರ್ತೆಗೆ ವರದಿಗಾರನಿಂದ ಬ್ಲ್ಯಾಕ್ ಮೇಲ್; ಅಶ್ಲೀಲ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬಿಜೆಪಿ ನಗರಮಂಡಲ ಅಧ್ಯಕ್ಷೆ, ಖಾಸಗಿ ಶಾಲೆಯ ಶಿಕ್ಷಿಯೊಬ್ಬರಿಗೆ ಖಾಸಗಿ ಚಾನಲ್ ವರದಿಗಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಆರೋಪ ಬಾಗಲಕೋಟೆಯಲ್ಲಿ ಕೇಳಿಬಂದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತೆ ವರದಿಗಾರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ಬಂದೆನವಾಜ್ ಸರಕಾವಸ್ ಎಂಬಾತ ಖಾಸಗಿ ಸುದ್ದಿವಾಹಿನಿ ವರದಿಗಾರ ಎಂದು ಹೇಳಿಕೊಂಡು ಜಮಖಂಡಿ ಬಿಜೆಪಿ ನಗರ ಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿಯೂ ಆಗಿರುವ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಅವರ ಫೋಟೋ ಕಣ್ಣಿಗೆ ಕಪ್ಪುಪಟ್ಟಿ ಅಂಟಿಸಿ ಅದನ್ನು ಅಶ್ಲೀಲ ಫೋಟೋ, ವಿಡಿಯೋದೊಂದಿಗೆ ಎಡಿಟ್ ಮಾಡಿ ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಅಡಿಬರಹ ಕೊಟ್ಟಿದ್ದಾನೆ. ಅಲ್ಲದೇ ನೋಡ್ದೆ ನೋಡ್ದೆ ನೋಡ್ಬಾರ್ದನ್ನು ನಾನೋಡ್ದೆ ಎಂಬ ಹಾಡನ್ನು ಎಡಿಟ್ ಮಾಡಿ ಕಳುಹಿಸಿದ್ದಾನಂತೆ.

ಬಳಿಕ ಅವರಿಗೆ ಕರೆ ಮಾಡಿ ನಾನು ಖಾಸಗಿ ಸುದ್ದಿವಾಹಿನಿ ವರದಿಗಾರ. ನನ್ನ ಬಳಿ ನಿಮ್ಮ ರಾಸಲೀಲೆ ವಿಡಿಯೋ ಇದೆ. ಅದನ್ನು ವೈರಲ್ ಮಾಡಬಾರದು ಎಂದರೆ ನನ್ನನ್ನು ಭೇಟಿಯಾಗಿ. ಸ್ವಲ್ಪ ಹಣವೂ ಖರ್ಚಾಗುತ್ತದೆ. ಇಲ್ಲವಾದಲ್ಲಿ ಎಲ್ಲರಿಗೂ ವಿಡಿಯೋ ಕಳುಹಿಸುವುದಾಗಿ ಬೇದರಿಕೆ ಹಾಕಿದ್ದಾನಂತೆ. ತಕ್ಷಣ ಗೀತಾ ಅವರು ಜಮಖಂಡಿ ನಗರ ಠಾಣೆಯಲ್ಲಿ ವರದಿಗಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.


Related Articles

Back to top button