Latest

ಸ್ಯಾಂಪಲ್ ಟೆಸ್ಟ್ ಕೊಟ್ಟು ಶ್ರೀಶೈಲಂಗೆ ಪಾದಯಾತ್ರೆ ಹೊರಟ ಭಕ್ತರು; 7 ಜನರಲ್ಲಿ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಬಾಗಲಕೋಟೆಯಲ್ಲಿ ಭಕ್ತರು ಶ್ರೀಶೈಲಂಗೆ ಪಾದಯಾತ್ರೆ ಮೂಲಕ ತೆರಳಿದ್ದು 7 ಜನರಲ್ಲಿ ಕೊರೊನಾ ಸೋಂಕು ದೃಧಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ಹಲವರು ಪಾದಯಾತ್ರೆ ಮೂಲಕ ಆಂಧ್ರಪ್ರದೇಶದ ಶ್ರೀಶೈಲಂ ಗೆ ತೆರಳಿದ್ದಾರೆ. ಹೋಗುವ ಮೊದಲು ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಿಸಿಕೊಂಡು ಹೋಗಿದ್ದರು. ಇದೀಗ ಅವರ ವರದಿ ಬಂದಿದ್ದು, ಅವರಲ್ಲಿ 7 ಜನರಿಗೆ ಪಾಸಿಟಿವ್ ಬಂದಿದೆ. ಆದರೆ ಭಕ್ತರು ಯಾತೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಆತಂಕವನ್ನು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಬಂದ ಕೊರೊನಾ ಸೋಂಕಿತ ಭಕ್ತರ ಪತ್ತೆಗಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಮನವಿ ಮಾಡಿದೆ.

ಭೀಕರ ಅಪಘಾತ; ತುಂಡಾಗಿ ಬಿದ್ದ ವ್ಯಕ್ತಿಯ ರುಂಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button