ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಭಾರತೀಯ ಸೇನೆಯಲ್ಲಿ ಸುದೀರ್ಘ 26 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯನ್ನು ಪಡೆದುಕೊಂಡು ನಗರಕ್ಕೆ ಆಗಮಿಸಿದ ಸೈನಿಕ ಸುರೇಶ ಶಂಕ್ರಪ್ಪ ಖನಗಾವಿ ಇವರನ್ನು ಬೈಲಹೊಂಗಲ ನಗರದಲ್ಲಿ ಪ್ರಭು ನೀಲಕಂಠ ಮಹಾಸ್ವಾಮಿಗಳು ಮೂರು ಸಾವಿರ ಮಠ ಇವರ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಮಾಜಿ ಸೈನಿಕರ ಸಂಘ ಹಾಗೂ ಅನೇಕರು ಗೌರವಪೂರ್ವಕವಾಗಿ ಸೈನಿಕನನ್ನು ನಗರಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭು ನೀಲಕಂಠ ಮಹಾಸ್ವಾಮಿಗಳು ದೇಶ ಸೇವೆ ಸಲ್ಲಿಸುವುದು ನಮ್ಮ ಪೂರ್ವಜನ್ಮದ ಪುಣ್ಯ ಕಾರ್ಯವನ್ನು ಮುಗಿಸಿ ಸೇವಾ ನಿವೃತ್ತಿ ಯೊಂದಿಗೆ ಆಗಮಿಸಿದ ಯೋಧ ಸುರೇಶ್ ಅವರ ಸೇವೆ ಅನನ್ಯವಾದದ್ದು ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿದಂತೆ ಸಮಾಜಸೇವೆ ಮಾಡುವುದರ ಮೂಲಕ ಮಹತ್ತರ ಕೊಡಗೆ ನೀಡಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಮುಖಂಡ ಸುಭಾಷ ತುರಮರಿ, ಉದ್ಯಮಿ ವಿಜಯ ಮೆಟಗುಡ್, ಪುರಸಭೆ ಸದಸ್ಯ ಗುರು ಮೆಟಗುಡ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಗುರನ್ನವರ, ಯುವ ಮುಖಂಡ ರವಿ ತುರಮರಿ, ಉಪನ್ಯಾಸಕ ರಮೇಶ ಯರಗಟ್ಟಿ, ಯುವ ಮುಖಂಡ ಸಂತೋಷ ಹಡಪದ, ರಕ್ಷಣಾ ವೇದಿಕೆಯ ಅಧ್ಯಕ್ಷ ಶಿವಾನಂದ ಮಲ್ಲಿಕಾರ್ಜುನ ಇಂಚಲ, ಸಂತೋಷ ಬೋರಕನವರ, ಡಾ ಮಹಾಂತೇಶ ಕಳ್ಳಿಬಡ್ಡಿ, ನೀಲಕಂಠೇಶ್ವರ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಡಾ. ಶಿವಕುಮಾರ ಪರಾಂಡೆ, ನ್ಯಾಯವಾದಿ ಆನಂದ ವಾಲಿ, ಸಂಗಪ್ಪ ಕಾದ್ರೊಳ್ಳಿ, ಜಗದೀಶ ಲೋಕಾಪುರ, ರಮೇಶ ಇಂಚಲ ರಾಜು ತಟ್ಟಿಮನಿ, ರಾಜು ಕಡಕೋಳ, ಪ್ರವೀಣ ಹುಣಸಿಕಟ್ಟಿ, ಈರಣ್ಣ ತಟ್ಟಿಮನಿ, ವೆಂಕಟೇಶ್ ದಾಸೋಗ, ಮಂಜು ಮರಶೆಟ್ಟಿ, ರಘು ಶಿಗಿಹಳ್ಳಿ, ಬಸವ ಸರ್ಕಲ್ ಗೆಳೆಯರ ಬಳಗ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಹಾಗೂ ದೇಶಾಭಿಮಾನಿಗಳು ಉಪಸ್ಥಿತರಿದ್ದರು.
ಮತದಾರರಿಗೆ ಪ್ರಧಾನಿ ಮೋದಿ ಭಾವಚಿತ್ರದ ಚೀಟಿ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ