
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಜಿಲ್ಲಾ ಅಭ್ಯಾಸ ವರ್ಗ ಬೆಳಗಾವಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯದಲ್ಲಿ ನಡೆಯಿತು. 4 ತಾಲ್ಲೂಕುಗಳಿ೦ದ 85 ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ ಮನೋಹರ್ ಮಠದ್ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ನಾರಾಯಣಜೀ ಸತ್ಸಂಗ ನೆರವೇರಿಸಿದರು. ಕೃಷ್ಣಭಟ್ಟ , ಮನೋಹರ್, ವಿಜಯ ಜಾಧವ ಮೊದಲಾದವರು ಭಾಗವಹಿಸಿದ್ದರು.
ಬಸವರಾಜ್ ಮತ್ತು ಸತೀಶ್ ಮಾಳ್ವದೆ ಕಾರ್ಯಕ್ರಮದ ಸಂಚಾಲಕರಾಗಿದ್ದರು. ವಾಲ್ಮೀಕಿ ಜಯಂತಿ ನಿಮಿತ್ತ ಪುಪ್ಪಾ೯ಚನೆ ಮತ್ತು ಸ್ಮರಣೆಯೂ ಇದೇ ವೇಳೆ ನಡೆಯಿತು .
ನಾಡು ನುಡಿಗಾಗಿ, ದೇಶಕ್ಕಾಗಿ ಬಲಿದಾನಗೈದ ಎಲ್ಲ ಹುತಾತ್ಮರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ