Karnataka News

*ಮಕ್ಕಳ ದಿನಾಚರಣೆಯಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಡಮಾಡುವ 2024ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ವಿಶೇಷ ಸಾಧನೆ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಹಾಗೂ ಸಾಧಕ ವ್ಯಕ್ತಿಗಳಿಗೆ ಸಚಿವೆ ಲಕ್ಷೀ ಹೆಬ್ಬಾಳಕರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ
ಧೈರ್ಯ, ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಹೊಸ ತಾಲ್ಲೂಕಿನ ಆನೆಕೆರೆ ಬಾಳೂರಿನ 2ನೇ ತರಗತಿ ವಿದ್ಯಾರ್ಥಿ ಆರ್.‌ ಮಣಿಕಂಠ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆರೋಡಿ ಗ್ರಾಮದ ಎಲ್‌. ನಿಶಾಂತ್‌ ಹಾಗೂ ಎ.ಎನ್.‌ ಅಶ್ವಿನ್‌, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೊಳಿದ ವೈಭವಿ, ಉಡುಪಿ ಜಿಲ್ಲೆ ಸಾಲಿಗ್ರಾಮದ ಬಿ. ಧೀರಜ್‌ ಐತಾಳ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹನಮಾಪುರದ ಮಹಮ್ಮದ್‌ ಸಮೀರ ಹಾಗೂ ಬೆಳಗಾವಿ ನಡಗಾವಿಯ 9ನೇ ವಿದ್ಯಾರ್ಥಿನಿ ಸ್ಫೂರ್ತಿ ಭಾಜನರಾಗಿದ್ದಾರೆ.

Home add -Advt

ವಿಶೇಷ ಸಾಧನೆ ಪ್ರಶಸ್ತಿ
ಬೆಂಗಳೂರು ನಗರ ಜಿಲ್ಲೆ ಉತ್ತರಹಳ್ಳಿಯ ವಿ. ಆರುಣಿ ವಿಶೇಷ ಸಾಧನೆ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿನಿ ಪ್ರತಿಭಾವಂತ ಕಲಾವಿದೆ ಹಾಗೂ ಕ್ರೀಡಾಪಟು ಆಗಿ ವಿಶೇಷ ಸಾಧನೆ ಜೊತೆಗೆ ಶೈಕ್ಷಣಿಕವಾಗಿಯೂ ವಿಶೇಷ ಸಾಧನೆ ಮಾಡಿದ್ಧಾರೆ.

ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳ ರಾಜ್ಯ ಪ್ರಶಸ್ತಿ
ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ವಾಣಿಗೆರೆ ಗ್ರಾಮದ ಸಂತ ಗ್ರಿಗೋರಿಯಸ್‌ ದಯಾ ಭವನ, ಧಾರವಾಡದ ಶಾರದ ಕಾಲೋನಿಯಲ್ಲಿರುವ ಹೊಂಬೆಳಕು ಪ್ರತಿಷ್ಠಾನ, ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಕೋಲಾರ ಜಯನಗರದ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘವು ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳ ರಾಜ್ಯ ಪ್ರಶಸ್ತಿಗೆ ಭಾಜನವಾಗಿವೆ.

ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿ
ಶಿವಮೊಗ್ಗ ಜಿಲ್ಲೆಯ ಆಲ್ಕೋಳದ ನಂದಿನಿ ಬಡಾವಣೆಯ ಎಚ್‌.ಪಿ. ಸುದರ್ಶನ್‌, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಹಳಿಯಾಳ ರಸ್ತೆಯ ಸುನೀಲ ಮ ಕಮ್ಮಾರ್‌, ಬೀದರ್‌ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ಕೊಡಂನಲ್‌ ನ ಸಂಗಮೇಶ್‌ ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಶಿರೂರಿನ ಗವಿಸಿದ್ದಯ್ಯ ಜ ಹಳ್ಳಿಕೇರಿ ಮಠ ಅವರು ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

Related Articles

Back to top button