Belagavi NewsBelgaum NewsKannada NewsKarnataka NewsLatest

*ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದಿರಿ: ಶಾಸಕ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಿಡಿಸಿಸಿ ಬ್ಯಾಂಕ್‌ ಗ್ರಾಹಕರು ಅಪಪ್ರಚಾರಕ್ಕೆ ಕಿವಿಕೊಡಬೇಡಿ. ಬಿಡಿಸಿಸಿ ಬ್ಯಾಂಕ್ ನ್ನು ಚೆನ್ನಾಗಿ ನಡೆಸುತ್ತೇವೆ. ಯಾವ ರೈತರಿಗೂ, ಗ್ರಾಹಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಇಲ್ಲಿನ ಸಿಪಿಎಡ್‌ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಕೊಡಲು ಉದ್ದೇಶಿಸಿರುವ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಡಿಸಿಸಿ ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಇಟ್ಟುಕೊಂಡು ಹೋಗಬೇಕು. ಏಕೆಂದರೆ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ಚುನಾವಣೆ ಮಾಡಿ ಈ ಆಡಳಿತ ನಡೆಸಬೇಕೆಂದು ನಮ್ಮ ಹತ್ತಿರ ಕೊಟ್ಟಿದೀರಿ. ಈ ಐದು ವರ್ಷದಲ್ಲಿ ಲೆಕ್ಕ ತಪ್ಪಿದರೆ ಎಲ್ಲಿ ಬೇಕಾದರೆ ನಿಂತು ನಮ್ಮನ್ನು ಕೇಳಿ ಎಂದು ಸವಾಲು ಹಾಕಿದರು.

Home add -Advt

ರಾಜಕಾರಣದಲ್ಲಿ ಆರೋಪ ಸರ್ವ ಸಾಮಾನ್ಯ: ಅಧಿಕಾರಿ ಬಿಟ್ಟು ಹೋದ ನಂತರ ಒಂದಿಷ್ಟು ಮಂದಿಗೆ ಬಹಳ ತೊಂದರೆಯಾಗಿದೆ. ರಾಜಕಾರಣದಲ್ಲಿ ಆರೋಪ ಸರ್ವ ಸಾಮಾನ್ಯ. ಆದರೆ ಗ್ರಾಹಕರು ಮಾತ್ರ ದಯಮಾಡಿ ಅಪಪ್ರಚಾರ ಕಿವಿಗೆ ಹಾಕಿಕೊಳ್ಳಬೇಡಿ. ಬ್ಯಾಂಕಿನ ವ್ಯವಹಾರ ಎಲ್ಲ ಲೆಕ್ಕ ಪತ್ರದಲ್ಲಿ ಬರೆಯಲಾಗುತ್ತದೆ. ನಿಮಗೇನಾದರೂ ಸಂಶಯ ಬಂದರೆ ಬ್ಯಾಂಕಿನ ಅಧ್ಯಕ್ಷರು ಹಾಗೂ ನಮ್ಮನ್ನು ಕೇಳಿದರೆ ದೇವರ ಸಾಕ್ಷಿಯಾಗಿ ನಾವು ಉತ್ತರ ಕೋಡುತ್ತೇವೆ ಎಂದರು.

ಪ್ರೆಸ್‌ ಕಾನ್ಸರೆನ್ಸ್ ನನ್ನ ಮೇಲೆ ಸಾಕಷ್ಟು ಆರೋಪ ಮಾಡಲಾಗುತ್ತಿದೆ. ಡಿಸಿಸಿ ಬ್ಯಾಂಕ್‌ ಗೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಏನು ಸಂಬಂಧ ಇದೆ ಎಂದು ಕೇಳುತ್ತಿದ್ದಾರೆ. ಅದಕ್ಕೆ ನಾನು ನಿಮಗೆ ಹೇಳುತ್ತೇನೆ. ನಾನು ಬಹಳ ವಿಡಿಯೋದಲ್ಲಿ ಹೇಳಿದ್ದೀನೆ. 1996 ಇಸವಿಯಿಂದ ಪ್ರಯತ್ನಿಸಿ 29 ವರ್ಷಕ್ಕೆ ಈ ಡಿಸಿಸಿ ಬ್ಯಾಂಕ್‌ ಚುಕ್ಕಾಣಿ ಹಿಡಿದಿದೇವೆ.ಇದನ್ನು ಸಹಿಸದವರು ನಮ್ಮ ಮೇಲೆ ಇಲ್ಲ ಸಲ್ಲದನ್ನು ಆರೋಪ ಮಾಡುತ್ತಿದ್ದಾರೆ. ವಿರೋಧಿಗಳ ಆರೋಪ ಸತ್ಯಕ್ಕೆ ದೂರವಾದ ವಿಷಯ. ಮುಖ್ಯವಾಗಿ ನನಗೂ ಈ ಬ್ಯಾಂಕ್‌ ಏನು ಸಂಬಂಧವಿದೆ ಎಂದು ಕೇಳುತ್ತಿದಾರೆ. ನಾನು ಕೂಡಾ 5 ವರ್ಷ ಈ ಬ್ಯಾಂಕಿನಲ್ಲಿ ಇರುವ ಜೊತೆಗೆ ಪ್ರತಿ ಪ್ರೆಸ್‌ ಕಾನ್ಸರೆನ್ಸ್ ಭಾಗವಹಿಸುತ್ತೇನೆ. ಯಾರು ಏನೆ ಅಂದರೂ ನಾನು ಮಾತ್ರ ತೆಲೆ ಕಡೆಸಿಕೊಳ್ಳುವದಿಲ್ಲ ಎನ್ನುವ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದರು.

ಅಣ್ಣಾಸಾಬ್ ಜೊಲ್ಲೆಯವರು ಪ್ರತಿಯೊಂದು ಲೆಕ್ಕ ಹಾಕಿ ಬ್ಯಾಂಕ್‌ ನಡೆಸುತ್ತಿದ್ದಾರೆ. ಮಂಗಳೂರು DCC ಬ್ಯಾಂಕ್ ರಿಕಾರ್ಡ್‌ ನಾವೇ ಮುರಿಯೋಣ ಎಂದು ಹಠ ತೊಟ್ಟಿದ್ದೇವೆ. ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಅದೇ ತಪ್ಪನ್ನು ಹೆಚ್ಚು ತೋರಿಸಲಾಗುತ್ತದೆ. ಈಗ ಬೆಳಗಾವಿ ಹಾಲು ಒಕ್ಕೂಟವನ್ನು ಜಿರೋ ಇದ್ದದನ್ನು 13 ಕೋಟಿ ಲಾಭವನ್ನು ಮಾಡಿದ್ದೇನೆ ಅದನ್ನು ಯಾಕೆ ತೋರಿಸಲ್ಲ. ಅದರ ಬಗ್ಗೆ ಯಾರು ಮಾತನಾಡಲ್ಲ. ಎಂದು ಪ್ರಶ್ನೆ ಮಾಡಿದ ಅವರು, ಗ್ರಾಹಕರು ಗಟ್ಟಿಯಾಗಿದ್ದರೆ ಸಾಕು ಯಾಕೆಂದರೆ ರಾಜಕಾರಣದಾಗ ನೀವೆಲ್ಲ ನೋಡುತ್ತೀರಿ ಅಪಪ್ರಚಾರ ಮತ್ತೊಂದು ಮಾಡುತ್ತಾರೆ ರಾಜಕಾರಣದಲ್ಲಿ ದೇಶದೊಳಗೆ ನಡೆಯುತ್ತದೆ ಎಲ್ಲಾ ಕಡೆ ನಡೆಯುತ್ತಿದೆ ಅದನ್ನು ಬಹಳ ನೀವು ತಲೆ ಕೆಡಿಸಿಕೊಳ್ಳಬೇಡಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ನಮ್ಮ ಬ್ಯಾಂಕ್ ಲೆಕ್ಕ ಕಾಗದ ಪತ್ರ ವ್ಯವಹಾರ ಕಾನೂನು ಪ್ರಕಾರ ಎಲ್ಲ ಮಾಡಿಕೊಂಡು ಹೋಗುತ್ತದೆ ನೀವು ಗಟ್ಟಿಯಾಗಿ ನಿಂತರೆ ನಮ್ಮ ಬಿಲ್ಡಿಂಗ್ ಗಟ್ಟಿಯಾಗಿರುತ್ತದೆ ಎಂದರು.

ನಮ್ಮ ತಪ್ಪನ್ನು ಸುಧಾರಿಸಿಕೊಳ್ಳಲು ನಾನು ಅಧ್ಯಕ್ಷರಿಗೆ ಹೇಳಿದ್ದೇನೆ. ನಮ್ಮ ಶುಗರ್ಸ್‌ ದಿಂದ ಹಣ ಕಟ್ಟಲಿಲ್ಲ ಎಂದರೆ ನಮ್ಮ ಕಾರ್ಖಾನೆಯನ್ನ ಸವಾಲು ಮಾಡಿ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಯಾವಾಗ 33 ಕೋಟಿ ಹಣ ಕಟ್ಟೋಕೆ ಆಗಲಿಲ್ಲ ಅಂದಾಗ ನನ್ನ ಕಾರ್ಖಾನೆ ತಗೋರಿ ಅಂತ ಹೇಳಿದ್ದೀನೆ ಎಂದು ತಿಳಿಸಿದರು.

ಬೆಳಗಾವಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ , ಬೆಳಗಾವಿ ಡಿಸಿಸಿ ಬ್ಯಾಂಕನ್ನು ದೇಶದಲ್ಲೇ ನಂಬರ ಒನ್‌ ಸ್ಥಾನಕ್ಕೆರಿಸಬೇಕೆಂಬ ಗುರಿ ಹೊಂದಿದ್ದೇವೆ. ಕಳೆದ 30 ವರ್ಷಗಳಲ್ಲಿ ಜಾರಿಗೆ ತರದಂತ ಯೋಜನೆಗಳನ್ನು ನಾವು ಇಂದು ಜಾರಿಗೆ ತಂದಿದ್ದೇವೆ ಎಂದರು.

ನವೆಂಬರ್‌ ತಿಂಗಳಲ್ಲಿ ನೂತನ ಆಡಳಿತ ಮಂಡಳಿ ಬಿಡಿಸಿಸಿ ಬ್ಯಾಂಕ ಚುಕ್ಕಾಣಿ ಹಿಡಿದ ನಂತರ ಬಿಡಿಸಿಸಿ ಬ್ಯಾಂಕ್‌ ನ ಠೇವಣಿ ಒಂದು ಕಡಿಮೆಯಾಗಿತ್ತು.ಕೆಲವರು ಬ್ಯಾಂಕ್‌ ಬಗ್ಗೆ ಮಾಡಿದ ಅಪಪ್ರಚಾರ ಮಾಡಿದ್ದಕ್ಕೆ ಠೇವಣಿ ಕಡಿಮೆಯಾಗಿತ್ತು. ಈ ವಿಷಯ ಏಕೆ ನಾನು ಹೇಳುತ್ತಿದ್ದೇನೆ ಎಂದರೆ ಸರ್ವರಿಗೆ ವಿಷಯ ಗೊತ್ತಾಗಬೇಕು. ಆದರೆ ಪ್ರಸ್ತುತ ಡಿಸಿಸಿ ಬ್ಯಾಂಕಿನಲ್ಲಿ 544 ಕೋಟಿ ಠೇವಣಿ ಹೆಚ್ಚಿಗೆಯಾಗಿದೆ. ಕಳೆದ ಒಂದು ವಾರದಿಂದ ದಿನಕ್ಕೆ 25 ಕೋಟಿ ರೂ. ಬ್ಯಾಂಕಿನ ಠೇವಣಿ ಹೆಚ್ಚಳವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಭಿವೃದ್ಧಿಗಾಗಿ ಬೆಳೆಸಾಲದೊಂದಿಗೆ ಇತರೆ ಸಾಲಗಳನ್ನು ಕೂಡ ನೀಡಲಾಗುತ್ತಿದೆ. ಅಲ್ಲದೇ ನೌಕರರಿಗೆ ಆರೋಗ್ಯ ವಿಮೆ, ಜೀವ ವಿಮೆ, ಪಿಂಚಣಿ, ಕಾರ್ಯದರ್ಶಿಗಳಿಗೆ ಪಿಂಚಣಿ, ನಿರ್ದೇಶಕರಿಗೆ ಯೋಜನೆ ಇನ್ನುಳಿದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿ ಇಂತಹ ಯೋಜನೆಗಳನ್ನು ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಅಳವಡಿಸಲಾಗುತ್ತಿದೆ. ಹೊಸ ಕಾನೂನಿನಂತೆ ಸಹಕಾರಿ ಸಂಸ್ಥೆಗಳು ನಿರಂತರ ಸೇವೆಗಳನ್ನು ಜನರಿಗೆ ನೀಡುವಂತಹ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಅರವಿಂದ ಪಾಟೀಲ್, ಅಪ್ಪಾಸಾಹೇಬ್ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ್ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ವಿರುಪಾಕ್ಷಿ ಮಾಮನಿ, ಮಲ್ಲಪ್ಪ ಯಾದವಾಡ, ನಾನಾಸಾಹೇಬ್ ಪಾಟೀಲ್, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಐ.ಸಿ. ಕಲ್ಮಠ, ಸಂಗಯ್ಯ ಹಿರೇಮಠ, ಪ್ರಕಾಶ ಬ್ಯಾಳಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಸಮಾರಂಭದಲ್ಲಿ ಉಪಸ್ಥಿರಿದ್ದರು.

Related Articles

Back to top button