
ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಸ್ಫೋಟಕ ಆರೋಪದೊಂದಿಗೆ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ ಗಲಾಟೆ ವೇಳೆ ಜನಾರ್ಧನ ರೆಡ್ಡಿ ಕಚೇರಿ ಮೇಲೆ ಗನ್ ಮ್ಯಾನ್ ನಿಂತ ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಇದು ರೆಡ್ಡಿ ವಿರುದ್ಧ ಹೊಸ ಆರೋಪಕ್ಕೆ ಕಾರಣವಾಗಿದೆ.
ಗಲಾಟೆ ವೇಳೆ ಜನಾರ್ಧನ ರೆಡ್ದಿ ಮನೆ ಮೇಲೆ ಗನ್ ಮ್ಯಾನ್ ನಿಂತಿರುವ ಫೋಟೋ ವನ್ನು ಭರತ್ ರೆಡ್ಡಿ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ. ಜನಾರ್ಧನ ರೆಡ್ದಿ ಕಡೆಯಿಂದಲೂ ಫೈರಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಗನ್ ಮ್ಯಾನ್ ವಿಚಾರಣೆ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಬಿಡುಗಡೆಯಾಗಿರುವ ಫೋಟೋ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.




