*ಫೈನಾನ್ಸ್ ಕಂಪನಿ ಕಿರುಕುಳ ಪ್ರಕರಣ: ಬಾಣಂತಿ ಕುಟುಂಬಕ್ಕೆ ಸಮಾಜ ಸೇವಕರಿಂದ ಸಹಾಯ ಹಸ್ತ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಂದು ತಿಂಗಳ ಬಾಣಂತಿ ಹೊರಹಾಕಿ ಫೈನಾನ್ಸ್ ಕಂಪನಿ ಮನೆ ಜಪ್ತಿ ಮಾಡಿದ್ದ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಸದ್ಯ ಬಾಣಂತಿ ಹಾಗೂ ಕುಟುಂಬಸ್ಥರು ಮರಳಿ ಮನೆಗೆ ಸೇರಿದ್ದು, ಬಾಣಂತಿ ಕುಟುಂಬಕ್ಕೆ ಸಮಾಜ ಸೇವಕರಿಂದ ಸಹಾಯ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿರೋ ಬಾಣಂತಿ ಮಧು ಬಡಿಗೇರಗೆ ಹಾಗೂ ಕುಟುಂಬಕ್ಕೆ ಸಮಾಜ ಸೇವಕ ಸಂತೋಷ ಗುಬ್ಬಚ್ಚಿ, ತಂಡದಿಂದ 10ಸಾವಿರ ರೂ ಆರ್ಥಿಕ ಸಹಾಯ ಮಾಡಲಾಗಿದೆ.
ಗೃಹ ಸಾಲದ ಕಂತು ತುಂಬಿಲ್ಲ ಎಂದು ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿ ಬಾಣಂತಿಯನ್ನು ಹಾಗೂ ಆಕೆಯ ಕುಟುಂಬವನ್ನು ಮನೆಯಿಂದಹೊರ ಹಾಕಿ ಮನೆಗೆ ಬೀಗ ಹಾಕಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಫೈನಾನ್ಸ್ ಸಿಬ್ಬಂದಿ ಮನವೊಲಿಸಿ ಮನೆ ಬೀಗ ಓಪನ್ ಮಾಡಿಸಿ, ಬಾಣಂತಿ ಹಾಗೂ ಕುಟುಂಬದವರು ಮನೆಗೆ ಹಿಂತಿರುಗುವಂತೆ ಮಾಡಿದ್ದರು. ಇದೀಗ ಆ ಕುಟುಂಬಕ್ಕೆ ಸಮಾಜ ಸೇವಕರು ನೆರವು ನೀಡಿ ಸಹಾಯ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ