Kannada NewsKarnataka NewsLatestLife Style
*ಬರೋಬ್ಬರಿ 5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರು ಸೀಜ್ ಮಾಡಿ ವಶಕ್ಕೆ ಪಡೆದ ಆರ್ ಟಿಒ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರನ್ನು ಆರ್ ಟಿಒ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ನಡೆದಿದೆ.
ಬೆಂಗಳುರ್ನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಬೆಂಟ್ಲಿ ಕಾರು ಮಾಲೀಕನ ಮನೆಗೆ ಆಗಮಿಸಿದ ಅರ್ ಟಿ ಒ ಅಧಿಕಾರಿಗಳು ಬೆಂತ್ಲಿ ಕಾರು ಸೀಜ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಾರಿನ ಮಾಲೀಕ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೇ ನಡೆದಿದೆ.
ಆರ್ ಟಿ ಒ ಅಧಿಕಾರಿಗಳು ಕಾರನ್ನು ಸೀಜ್ ಮಾಡ ಕಾರಣ ಸುಳ್ಳು ಮಾಹಿತಿ ನೀಡಿ ಕಡಿಮೆ ಮೌಲ್ಯ ತೋರಿಸಿ ಕಾರು ನೋಂದಣಿ ಮಾಡಿ ತೆರಿಗೆ ವಂಚಿಸಿದ್ದು. ಐಷಾರಾಮಿ ಬೆಂಟ್ಲಿ ಕಾರಿನ ಮೌಲ್ಯ 5 ಕೋಟಿ 50 ಲಕ್ಷ ರೂಪಾಯಿ. ಆದರೆ ಕಾರಿನ ಮಾಲೀಕ ನೋಂದಣಿ ವೇಳೆ 2,43,50,000 ರೂ ಮೌಲ್ಯದ ಕಾರು ಎಂದು ಹೇಳಿ ನೋಂದಣಿ ಮಾಡಿಸಿದ್ದಾರೆ. ಈ ಮೂಲಕ ಸುಮಾರು 70 ಲಕ್ಷದಷ್ಟು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಟ್ಲಿ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.



