ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅವಾಂತರದಿಂದಾಗಿ ಪ್ರವಾಹವುಂಟಾಗಿದ್ದು, ಐಷಾರಾಮಿ ಬಡವಾಣೆಗಳು, ರಸ್ತೆಗಳಲಿ ದೋಣಿಯಲ್ಲಿ ತೆರಳಬೇಕಾದ ಪರಿಸ್ಥಿತಿ ಬಂದಿದೆ. ಇಷೆಲ್ಲ ಅವಾಂತರಗಳಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿನ್ನೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ದೋಣಿಗಳಲ್ಲಿ ಹೋಗಬೇಕಾದ ಸ್ಥಿತಿ. ಬೆಂಗಳೂರು ನಗರದಲ್ಲಿ ದೋಣಿಯಲ್ಲಿ ಹೋಗುವ ಪರಿಸ್ಥಿತಿ ಬಂದಿದೆ. ಇತಿಹಾಸದಲ್ಲಿಯೇ ಇಂಹ ದೃಶ್ಯವನ್ನು ನಾನು ನೋಡಿರಲಿಲ್ಲ ಎಂದರು.
ಕೆರೆಗಳ ಹೂಳು ಎತ್ತಿದ್ದರೆ, ಕಾಲುವೆ ಹೂಳು ತೆಗೆದಿದ್ದರೆ, ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. ಅದನ್ನೆಲ್ಲ ಮಾಡದ ರಾಜ್ಯ ಸರ್ಕಾರ ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ. ಇಷ್ಟಕ್ಕೆಲ್ಲ ಹಿಂದಿನ ಸರ್ಕಾರ ಕಾರಣ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಕೂಡ ಇದನ್ನೇ ಹೇಳುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಈಗ ನಿಮ್ಮದೇ ಸರ್ಕಾರ ಇದೆ ಈಗ ಯಾಕೆ ಏನೂ ಮಾಡಿಲ್ಲ ಎಂದು ಪ್ರಶ್ನಿಸಿದರು.
ಹಲವು ಬಡಾವಣೆಗಳು ಸಂಪೂರ ಜಲಾವೃತಗೊಂಡಿವೆ. ರಸ್ತೆಗಳಲ್ಲಿ 10-12 ಅಡಿಗಳಷ್ಟು ನೀರು ನಿಂತುಕೊಂಡಿದೆ. ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಊಟ ಹಾರ ಕೂಡ ಸಿಗುತ್ತಿಲ್ಲ. ಅನೇಕರು ಮನೆಬಿಟ್ಟು ಹೋಟೆಲ್ ನಲ್ಲಿ ವಾಸ ಮಾಡುತ್ತಿದ್ದಾರೆ. ನೀರಿನಲ್ಲಿ ಮುಳುಗಿದ ಮನೆಗಳಿಗೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಭಾರಿ ಮಳೆಗೆ ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಆಕೆ ಕುಟುಂಬಕ್ಕೂ ಪರಿಹಾರ ನೀಡಿಲ್ಲ. ಬೆಂಗಳೂರಿನಲ್ಲಿ ಮಳೆಯಿಂದಾದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಸದನದ ಒಳಗೂ ಹೊರಗೂ ಹೋರಾಟ ನಡೆಸುತ್ತೇವೆ ಎಂದರು.
ರಾಜಧಾನಿಯಲ್ಲಿ ಉಂಟಾದ ಈ ದುರಾವಸ್ಥೆಗೆ ಸರ್ಕಾರದ ಬೇಜವಬ್ದಾರಿಯೇ ಕಾರಣ. ಒತ್ತುವರಿ ತೆರವು ಮಾಡಿದ್ರೆ ಇಂತಹ ಸಮಸ್ಯೆಯೇ ಆಗುತ್ತಿರಲಿಲ್ಲ. 1953 ಒತ್ತುವರಿ ಪೈಕಿ 1300 ಒತ್ತುವರಿಯನ್ನು ನಾವು ತೆರವು ಮಾಡಿದ್ದೆವು. 653 ರಾಜಕಾಲುವೆ ಒತ್ತುವರಿ ತೆರವು ಮಾತ್ರ ಬಾಕಿ ಇತ್ತು. ಬಿಜೆಪಿ ಸರ್ಕಾರವೇ ಇದೆ. ಆದರೂ ಯಾಕೆ ಮಾಡಿಲ್ಲ? ಒತ್ತುವರಿ ತೆರವು ಮಾಡದೇ ಅನಗತ್ಯವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಯಾಕೆ? ಎಂದು ಕೇಳಿದ್ದಾರೆ.
ಕನ್ನಡದಲ್ಲಿ ಬರೆದಿದ್ದ ಚೆಕ್ ತಿರಸ್ಕರಿಸಿದ ಬ್ಯಾಂಕ್; 85,000 ದಂಡ ವಿಧಿಸಿದ ಕೋರ್ಟ್
https://pragati.taskdun.com/latest/kannada-checkrejectsbi85177rs-fine-court/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ