*ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಟೋಲ್ ಪ್ಲಾಜಾ; ಯಾವ ವಾಹನಕ್ಕೆ ಎಷ್ಟು ದರ?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಟೋಲ್ ದರ ಹೆಚ್ಚಳ ಖಂಡಿಸಿ ಈಗಾಗಲೆ ಪ್ರತಿಭಟನೆಗಳು ಆರಂಭವಾಗಿದ್ದು, ಈ ಮಧ್ಯೆ ವಾಹನ ಸವಾರರಿಗೆ ಮತ್ತೊಂದು ಆಘಾತ ಎದುರಾಗಿದೆ. ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಟೋಲ್ ಪ್ಲಾಜಾ ಆರಂಭವಾಗಲಿದ್ದು, ವಾಹನಗಳಿಗೆ ದರವೂ ನಿಗದಿಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಬಳಿ ಜುಲೈ 1ರಿಂದ ಟೋಲ್ ಪ್ಲಾಜಾ ಆರಂಭವಾಗಲಿದ್ದು, ಮಂಡ್ಯ ಜಿಲ್ಲೆಯ 55.134 ಕಿ.ಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಏಕಮುಖ ವಾಹನ ಸಂಚಾರಕ್ಕೆ
ಕಾರು, ಜೀಪು, ವ್ಯಾನು 155 ರೂಪಾಯಿ
ಲಘು ವಾಹನ, ಲಘು ಸರಕು ವಾಹನ, ಮಿನಿ ಬಸ್-250 ರೂ
ಟ್ರಕ್/ಬಸ್ 525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ -575 ರೂ (4-6 ಆಕ್ಸೆಲ್ ಗಳು)825 ರೂ
ಭಾರಿ ನಿರ್ಮಾಣ ಯಂತ್ರಗಳು/ ಭೂ ಅಗೆತದ ಸಾಧನಗಳು/ ಬಹು ಆಕ್ಸಲ್ ವಾಹನ -825 ರೂಪಾಯಿ
ದೊಡ್ಡ ಗ್ರಾತ್ರದ ವಹನ -1005 ರೂ ನಿಗದಿಯಾಗಿದೆ.
ದ್ವಿಮುಖವಾಹನ ಸಂಚಾರಕ್ಕೆ
ಕಾರು, ಜೀಪು, ವ್ಯಾನು 235 ರೂಪಾಯಿ
ಲಘು ವಾಹನ, ಲಘು ಸರಕು ವಾಹನ, ಮಿನಿ ಬಸ್-375 ರೂಪಾಯಿ
ಟ್ರಕ್/ಬಸ್ 790 ರೂಪಾಯಿ
ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂಪಾಯಿ (4-6 ಆಕ್ಸೆಲ್ ಗಳು)825 ರೂ
ಭಾರಿ ನಿರ್ಮಾಣ ಯಂತ್ರಗಳು/ ಭೂ ಅಗೆತದ ಸಾಧನಗಳು/ ಬಹು ಆಕ್ಸಲ್ ವಾಹನ -1240 ರೂಪಾಯಿ
ದೊಡ್ಡ ಗ್ರಾತ್ರದ ವಹನ – 1510 ರೂ ನಿಗದಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ