Latest

ಎಣ್ಣೆಗಾಗಿ ಸ್ನೇಹಿತನನ್ನೇ ಬೀಯರ್ ಬಾಟಲ್ ನಿಂದ ಹೊಡೆದು ಕೊಂದ ಪಾಪಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಣ್ಣೆ ಕೊಡಲಿಲ್ಲ ಎಂದು ಬೀಯರ್ ಬಾಟಲ್ ನಿಂದ ಸ್ನೇಹಿತನನ್ನೇ ಭೀಕರವಾಗಿ ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣಸಿದ್ದಯ್ಯ ಎಂಬುವವರು ಬಂಧಿತ ಆರೋಪಿಗಳು. ಆರೋಪಿಗಳು ಮೇ 31ರ ರಾತ್ರಿ ಕೆಂಗೇರಿ ಬಳಿಯ ಸ್ನೇಹಿತನ ರೂಂನಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಕಂಠಪೂರ್ತಿ‌ ಮದ್ಯ ಸೇವಿಸಿ ಎಣ್ಣೆಗಾಗಿ ಮತ್ತೆ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ನಾಲ್ವರ ನಡುವೆ ಗಲಾಟೆ ತಾರಕಕ್ಕೇರಿ ಮಣಿ ಎಂಬಾತನ ಮೇಲೆ ಮೂವರು ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಮೂವರು ಸೇರಿ ಮಣಿ ಮೇಲೆ ಬಿಯರ್ ಬಾಟಲ್‍ಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಕೆಂಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button