Kannada NewsKarnataka NewsLatest

ಬೆಂಗಳೂರು – ಪುಣಾ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ; NH4ಕ್ಕೆ ಪರ್ಯಾಯ; ಕೇಂದ್ರದ ಬೃಹತ್ ಯೋಜನೆ

40 ಸಾವಿರ ಕೋಟಿ ರೂ. ಬಂಡವಾಳ

 

ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ – ಬೆಳಗಾವಿ ಪಾಲಿಗೆ ಒಂದರ ಮೇಲೊಂದು ಬೃಹತ್ ಯೋಜನೆಗಳು ವರವಾಗಿ ಬರುತ್ತಿವೆ. ಇದೀಗ ಕೇಂದ್ರ ಸರಕಾರ ಬೆಂಗಳೂರು – ಪುಣಾ ರಾಷ್ಟ್ರೀಯ ಹೆದ್ದಾರಿ ಎನ್ಎಚ್4ಕ್ಕೆ ಪರ್ಯಾಯವಾಗಿ ಮತ್ತೊಂದು ಹೆದ್ದಾರಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಪ್ರವಾಹದಿಂದಾಗಿ ನಿರಂತರ ಆಗುತ್ತಿರುವ ಸಮಸ್ಯೆ ತಪ್ಪಿಸಲು ಮತ್ತು ಸುಮಾರು 76 ಕಿಮೀ ಅಂತರ ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.

ಕೇಂದ್ರ ಸರಕಾರದ ಈ ಯೋಜನೆ 40 ಸಾವಿರ ಕೋಟಿ ರೂಪಾಯಿ ವೆಚ್ಚದ್ದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಸಾಂಗ್ಲಿಯಲ್ಲಿ ತಿಳಿಸಿದ್ದಾರೆ.

ಈ ಹೆದ್ದಾರಿ ಪ್ರಸ್ತುತ ಇರುವ ಹೆದ್ದಾರಿಯ ಮಾರ್ಗದಲ್ಲಿ ಸಾಗುವುದಿಲ್ಲ. ಇದು ಹೊಸ ಮಾರ್ಗವನ್ನೇ ಹಾದು ಹೋಗಲಿದೆ. ಸಾತಾರಾ ಜಿಲ್ಲೆಯ ಖಾಂಡಲಾ, ಫಾಲ್ತಾನ್, ಖಟಾವೋ  ಪ್ರದೇಶಗಳಲ್ಲಿ ಸಾಗಿ, ಸಾಂಗ್ಲಿ ಜಿಲ್ಲೆಯ ಖಾನಾಪುರ, ತಸಗಾಂವ್, ಕಾವ್ತೆ ಮಹಾನ್ ಕಾಲ್ ಮಾರ್ಗವಾಗಿ ಹೋಗಲಿದೆ. ಕರ್ನಾಟಕದಲ್ಲಿ ಇದು ಬೆಳಗಾವಿ- ಬಾಗಲಕೋಟೆ – ಗದಗ- ಕೊಪ್ಪಳ -ಬಳ್ಳಾರಿ – ದಾವಣಗೆರೆ -ಚಿತ್ರದುರ್ಗ – ತುಮಕೂರು ಮಾರ್ಗವಾಗಿ ಸಾಗಲಿದೆ. ಹುಬ್ಬಳ್ಳಿ – ಧಾರವಾಡ, ಹಾವೇರಿ ಜಿಲ್ಲೆಗಳು ಈ ಮಾರ್ಗದಲ್ಲಿ ಸಿಗುವುದಿಲ್ಲ.

ಪ್ರಸ್ತುತ ಪುಣೆ – ಬೆಂಗಳೂರು ಹೆದ್ದಾರಿ 775 ಕಿಮೀ ಇದ್ದು, ಹೊಸ ಮಾರ್ಗ 699 8.ಕಿಮೀ ಉದ್ದವಿರಲಿದೆ.

 

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕಿತ್ತೂರು ಕರ್ನಾಟಕಕ್ಕೆ ಭಾಗ್ಯದ ಬಾಗಿಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button