Latest

*ಕರ್ನಾಟಕ ಅರಣ್ಯ ಸಿಬ್ಬಂದಿ-ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಚಕಮಕಿ; ಮೃತ ವ್ಯಕ್ತಿ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಮಿಳುನಾಡು ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿ ಬೆನ್ನಲ್ಲೇ ತಮಿಳುನಾಡಿನ ವ್ಯಕ್ತಿಯ ಓರ್ವನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ-ತಮಿಳುನಾಡು ಗಡಿ ಭಾಗ ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ವಲಯದಲ್ಲಿ ಕರ್ನಾಟಕ ಅರಣ್ಯ ಸಿಬ್ಬಂದಿ ಹಾಗೂ ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ನಿನ್ನೆ ಶವವೊಂದು ಪತ್ತೆಯಾಗಿತ್ತು. ತಮಿಳುನಾಡು ಬೇಟೆಗಾರನಾಗಿದ್ದು, ಆತ ಕರ್ನಾಟಕ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನು ನಿರಾಕರಿಸಿರುವ ಸಚಿವ ವಿ.ಸೋಮಣ್ಣ ಕರ್ನಾಟಕ ಅರಣ್ಯ ಸಿಬ್ಬಂದಿ ಗುಂಡಿನ ದಾಳಿಗೆ ಆತ ಬಲಿಯಾಗಿಲ್ಲ, ಸಿಕ್ಕ ಶವವನ್ನು ತಮಿಳುನಾಡಿನವರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು ವರದಿ ಬಂದ ಬಳಿಕ ಖಚಿತ ಮಾಹಿತಿ ತಿಳಿಯಲಿದೆ ಎಂದಿದ್ದಾರೆ.

ಮೃತ ವ್ಯಕ್ತಿಯ ಬಳಿ ಜಿಂಕೆ ಶವ ಹಾಗೂ ಗನ್ ಕೂಡ ಸಿಕ್ಕಿದೆ. ಆತ 7-8 ವರ್ಷಗಳ ಹಿಂದೆಯೂ ಬೇಟೆಯಾಡಲು ಬಂದು ಸಿಕ್ಕಿಬಿದ್ದಿದ್ದ. ಆತ ಮಾಡಿದ ತಪ್ಪಿಗೆ ಪರಮಾತ್ಮನಿಂದ ಶಿಕ್ಷೆಯಾಗಿದೆ. ಮೀನು ಹಿಡಿಯಲು ಸಾವಿರಾರು ಮೀನುಗಾರರು ಬರುತ್ತಾರೆ. ಯಾವ ಮೀನುಗಾರರಿಗೂ ಅನಾನುಕೂಲವಾಗಿಲ್ಲ. ಆತ ಮೀನುಗಾರನಾಗಿದ್ದರೆ ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಲಿದೆ. ಒಂದು ವೇಳೆ ಆತ ಅಮಾಯಕನಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Home add -Advt

*ಚುನಾವಣೆ ಸಮಯದಲ್ಲೇ ಬರೋಬ್ಬರಿ 7,361 ಪಾತಕಿಗಳಿಗೆ ರೌಡಿಶೀಟ್ ನಿಂದ ಮುಕ್ತಿ*

https://pragati.taskdun.com/7361-rowdysreleaserowdysheetpolice/

Related Articles

Back to top button