ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗೆ ಮದುವೆ ವೆಬ್ ಸೈಟ್ ಗಳಲ್ಲಿ ಪರಿಚಯವಾಗಿ ಬಳಿಕ ಮೋಸ ಮಾಡಿ, ವಂಚಿಸುವ ಘಟನೆಗಳಿಗೇನೂ ಕಡಿಮೆಯಿಲ್ಲ. ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಪರಿಚಯನಾದ ವ್ಯಕ್ತಿಯೊಬ್ಬ ಟೆಕ್ಕಿ ಯುವತಿಗೆ 10 ಲಕ್ಷ ರೂಪಾಯಿ ವಂಚಿಸಿ ಕೈಕೊಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಅದಿಕರ್ಷ್ ಶರ್ಮಾ ಟೆಕ್ಕಿ ಯುವತಿಗೆ ವಂಚಿಸಿರುವ ವ್ಯಕ್ತಿ. ಮೋಸ ಹೋದ ಯುವತಿ ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಪ್ರೊಫೈಲ್ ಹಾಕಿದ್ದೆ. ಅದಕ್ಕೆ ಅದಿಕರ್ಷ್ ಶರ್ಮಾ ರಿಕ್ವೆಸ್ಟ್ ಕಳುಹಿಸಿದ್ದ. ನಮ್ಮಿಬ್ಬರ ಪ್ರೊಫೈಲ್ ಮ್ಯಾಚ್ ಆಗಿತ್ತು. ವಾಟ್ಸಪ್ ನಂಬರ್ ಶೇರ್ ಮಾಡಿ ಚಾಟ್ ಮಾಡಲು ಆರಂಭಿಸಿದೆವು. ಹೀಗೆ ಪರಿಚಯ ಆರಂಭವಾಗಿ ಮದುವೆ ಮಾತುಕತೆಯೂ ನಡೆಯಿತು. ಮನೆಗೆ ಬಂದು ಹುಣ್ಣು ಕೇಳಿದ್ದಾರೆ. ಮನೆಯಲ್ಲೂ ಒಪ್ಪಿದ್ದರು. ಒಂದು ದಿನ ಬ್ಯುಸಿನೆಸ್ ಗಾಗಿ 10 ಲಕ್ಷ ಹಣಬೇಕೆಂದು ಕೇಳಿದ್ದ. ಹೇಗಿದ್ದರೂ ಮದುವೆಯಾಗುವ ಹುಡುಗ ಎಂದು 10 ಲಕ್ಷ ಹಣ ಪಡೆದು ಆತನಿಗೆ ಕೊಟ್ಟಿದ್ದೇವೆ. ಒಂದು ತಿಂಗಳು ಇಎಂಐ ಕಟ್ಟುವ ನಾಟಕವಾಡಿ ಈಗ ಬೆಂಗಳೂರಿನಿಂದಲೇ ಪರಾರಿಯಾಗಿದ್ದಾನೆ. ಕಾಲ್ ಮಾಡಿದರೆ ಸ್ವಿಚ್ಡ್ ಆಫ್ ಬರ್ತಿದೆ ಎಂದು ಯುವತಿ ಹೇಳಿದ್ದಾಳೆ.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 406, 420 ಅಡಿ ಎಫ್ ಐಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ