Latest

ಕೊರೊನಾ ಸೋಂಕಿಗೆ ಮತ್ತೋರ್ವ ಖಾಕಿ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಾಹಾಮಾರಿ ಕೊರೋನಾ ಪೊಲೀಸರನ್ನು ಸೇರಿದಂತೆ ಹಲವರನ್ನು ಬಲಿಪಡೆದುಕೊಳ್ಳುತ್ತಿದೆ. ಇಂದು ಸೋಂಕಿಗೆ ಮತ್ತೊರ್ವ ಎಎಸ್ಐ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ವೈಟ್​​ಫೀಲ್ಡ್ ಪೊಲೀಸ್ ಠಾಣೆಯ 57 ವರ್ಷದ ಎಎಸ್ಐ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಎಎಸ್ಐಗೆ 50 ವರ್ಷ ಮೇಲ್ಪಟ್ಟ ಹಿನ್ನಲೆಯಲ್ಲಿ ಮನೆಯಲ್ಲೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿತ್ತು. ಇಲಾಖೆ ಸೂಚನೆಯಂತೆ ಅವರು ಮನೆಯಲ್ಲೇ ಇದ್ದರು. ಆದರೆ ಏಕಾಏಕಿ ಮನೆಯ ಶೌಚಾಲಯದಲ್ಲಿ ಎ ಎಸ್ ಐ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬದವರು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆ ಎಎಸ್ಐ ಮೃತಪಟ್ಟಿದ್ದಾರೆ.

ಮೃತ ಎಎಸ್ಐ ಸ್ವಾಬ್ ಟೆಸ್ಟ್ ಮಾಡಿದ ವೇಳೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಈ ನಡುವೆ ನಗರದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 50 ವರ್ಷ ಮೇಲ್ಪಟ್ಟ ಪೊಲೀಸರು ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

Home add -Advt

Related Articles

Back to top button