Kannada NewsKarnataka NewsLatest

*ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್ ನಲ್ಲಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಟ್ಯೂಷನ್ ಕ್ಲಾಸ್ ನಿಂದ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದಾನೆ.

ಕಳೆದ ಭಾನುವಾರ ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಪರಿನವ್ ಎಂಬ ಬಾಲಕ ನಾಪತ್ತೆಯಾಗಿದ್ದ. ಇದೀಗ ಬಾಲಕ ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿದ್ದಾನೆ.

6 ನೇ ತರಗತಿ ಬಾಲಕ ಪರಿನವ್ ನನ್ನು ಅವರ ತಂದೆ ಬೆಂಗಳೂರಿನ ವೈಟ್ ಫೀಲ್ಡ್ ನ ಅಲೆನ್ ಟ್ಯೂಷನ್ ಕ್ಲಾಸ್ ಗೆ ಡ್ರಾಪ್ ಮಾಡಿದ್ದರು. ಮಧ್ಯಾಹ್ನ ಬಾಲಕನನ್ನು ಟ್ಯೂಷನ್ ಕ್ಲಾಸ್ ನಿಂದ ಪಿಕ್ ಮಾಡಲು ಸ್ವಲ್ಪ ತಡವಾಗಿದೆ. ಅಷ್ಟರಲ್ಲಿ ಬಾಲಕ ನಾಪತ್ತೆಯಾಗಿದ್ದಾನೆ.

Home add -Advt

ಟ್ಯೂಷನ್ ಕ್ಲಾಸ್ ನಿಂದ ಮಾರತ್ತಹಳ್ಳಿವರೆಗೂ ನಡೆದುಕೊಂಡು ಬಂದಿರುವ ಬಾಲಕ ಬಳಿಕ ಬಿಎಂಟಿಸಿ ಬಸ್ ಹತ್ತಿದ್ದಾನೆ. ಪರಿನವ್ ಬಸ್ ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನಂತರ ಬಾಲಕನ ಸುಳಿವು ಸಿಕ್ಕಿರಲಿಲ್ಲ.

ಬಾಲಕ ನಾಪತ್ತೆಯಾಗಿರುವ ವಿಷಯ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾರ್ವಜನಿಕರು ಗಮನಿಸಿದ್ದಾರೆ. ಹೈದರಾಬಾದ್ ನ ಮೆಟ್ರೋ ನಿಲ್ದಾಣದಲ್ಲಿ ಬಾಲಕನೊಬ್ಬ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಬಾಲಕನ ಗುರುತು ಪತ್ತೆ ಮಾಡಿದ ಪೊಲೀಸರು ಪೋಷಕರಿಗೆ ತಿಳಿಸಿದ್ದಾರೆ. ಬಾಲಕ ಪತ್ತೆಯಾದ ವಿಷಯ ಕೇಳಿ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button