ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ಕೆಮಿಕಲ್ ಫ್ಯಾಕ್ಟ್ರಿಗೆ ಬೆಂಕಿ ಬಿದ್ದ ಪ್ರಕರಣದ ಹಿಂದಿನ ಸತ್ಯ ಇದೀಗ ಬಯಲಾಗಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಫ್ಯಾಕ್ಟ್ರಿಯ ಹೊರಗಡೆ ಇಟ್ಟಿದ್ದ ಬ್ಯಾರೆಲ್ ನಿಂದ ಕೆಮಿಕಲ್ ವರ್ಗಾವಣೆ ಮಾಡುವ ವೇಳೆ ಬ್ಯಾರಲ್ ಗಳ ನಡುವೆ ಸಂಭವಿಸಿದ ಘರ್ಷಣೆಯಿಂದಾಗಿ ಹಾಗೂ ಅದೇ ವೇಳೆ ಬಿಸಿಲಿನ ಧಗೆ ಹೆಚ್ಚಿದ್ದ ಕಾರಣ ಬೆಂಕಿ ಅವಘಡ ಸಂಭವಿಸಿದೆ. ಲಿಂಗರಾಜಪುರದಲ್ಲಿನ ಇಂಡಸ್ಟ್ರಿಯೊಂದಕ್ಕೆ ಈ ಕೆಮಿಕಲ್ ಬ್ಯಾರಲ್ ಗಳನ್ನು ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಫ್ಯಾಕ್ಟ್ರಿ ಹೊರಗಡೆಗೆ ಸಂಗ್ರಹಿಸಿಡಲಾಗುತ್ತಿತ್ತು. ಈ ವೇಳೆ ಒಂದು ಬ್ಯಾರಲ್ ನಲ್ಲಿ ಕಡಿಮೆ ಪ್ರಮಾಣದ ಕೆಮಿಕಲ್ ಇದ್ದುದ್ದರಿಂದ ಇನ್ನಷ್ಟು ಕೆಮಿಕಲ್ ವರ್ಗಾವಣೆ ಮಾಡಲಾಗುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಗೋದಾಮಿನಲ್ಲಿ ಇದ್ದ 320 ಬ್ಯಾರಲ್, 16 ಬಗೆಯ ಕೆಮಿಕಲ್ಸ್ ಬೆಂಕಿಗಾಹುತಿಯಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ