ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮೊದಲು ಕೊರೊನಾ ಸೊಂಕು ಪ್ರಕರಣ ಪತ್ತೆಯಾದ ರಾಜಧಾನಿ ಬೆಂಗಳೂರಿನ 20 ಪ್ರದೇಶಗಳನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಈಗಾಗಲೇ ರಾಜ್ಯದ 18 ಜಿಲ್ಲೆಗಳನ್ನ ಕೊರೊನಾ ಹಾಟ್‍ಸ್ಪಾಟ್‍ಗಳು ಅಂತ ಗುರುತಿಸಲಾಗಿದೆ. ಅದರಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದ್ದು, 70 ಮಂದಿ ಕೊರೊನಾ ಪೀಡಿತರಾಗಿದ್ದಾರೆ. ಒಂದು ಹಂತದಲ್ಲಿ ಬೆಂಗಳೂರಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಿತ್ತು. ಆದರೆ ಜಮಾತ್ ತಬ್ಲಿಘಿಗಳಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಯ್ತು. ಪರಿಣಾಮ ರಾಜಧಾನಿಯ 20 ಏರಿಯಾಗಳು ಕೊರೊನಾ ಹಾಟ್‍ಸ್ಪಾಟ್‍ಗಳಾಗಿ ಬದಲಾಗಿವೆ.
ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ಬೆಂಗಳೂರು ದಕ್ಷಿಣ ವಲಯದ ಜೆಪಿನಗರ, ಜಯನಗರ, ಬಸವನಗುಡಿ, ವಿಜಯನಗರ, ಮೂಡಲಪಾಳ್ಯ, ನಾಗರಭಾವಿ, ಹಂಪಿನಗರ, ಬಾಪೂಜಿನಗರ, ಬಿಟಿಎಂ ಲೇಔಟ್, ಕೋರಮಂಗಲ, ಆಡುಗೋಡಿ, ಬನಶಂಕರಿ, ಪದ್ಮನಾಭನಗರ ಸೇರಿ ಒಟ್ಟು 13 ಕಡೆ 15 ಜನ ಸೋಂಕಿತರಿದ್ದಾರೆ. ಇದರಲ್ಲಿ ಸದ್ಯ ಬಾಪೂಜಿನಗರವನ್ನ ಸೀಲ್‍ಡೌನ್ ಮಾಡಲಾಗಿದೆ.
ತಬ್ಲಿಘಿಗಳಿಂದ ಬೆಂಗಳೂರು ಪಶ್ಚಿಮ ವಲಯಕ್ಕೆ ಕಂಟಕ ಉಂಟಾಗಿದ್ದು, ಈ ವ್ಯಾಪ್ತಿಯಲ್ಲಿ ಬರೋ ಪಾದರಾಯನಪುರವನ್ನು ಸೀಲ್ ಮಾಡಲಾಗಿದೆ. ಪೊಲೀಸರು ಗಲ್ಲಿಗಲ್ಲಿಗಳನ್ನು ಬಂದ್ ಮಾಡಿದ್ದಾರೆ. ಪಾದರಾಯನಪುರ ಅಷ್ಟೇ ಅಲ್ಲ, ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ, ನಂದಿನಿ ಲೇಔಟ್, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗಾಂಧಿನಗರ, ಬಸವೇಶ್ವರನಗರ, ಜೆಜೆ ನಗರ, ನಾಯಂಡಹಳ್ಳಿಯಲ್ಲಿಲಾಕ್‍ಡೌನ್ ನಿಯಮವನ್ನ ಕಠಿಣಗೊಳಿಸಲಾಗಿದೆ.
ಪೂರ್ವ ವಲಯದಲ್ಲಿ 14 ಮಂದಿ ಕೊರೊನಾ ಸೋಂಕಿತರಿದ್ದಾರೆ. ಸಂಜಯ ನಗರ, ಆರ್.ಟಿ.ನಗರ ಹೆಬ್ಬಾಳ, ಕಮ್ಮನಹಳ್ಳಿ, ನಾಗಾವಾರ, ಕೆಜಿ ಹಳ್ಳಿ, ಡಿಜೆಹಳ್ಳಿ, ಬಾಣಸವಾಡಿ, ಜೆಸಿನಗರ, ಇಂದಿರಾನಗರ, ಸಿವಿರಾಮನ್ ನಗರ, ಜೆಬಿ ನಗರ, ಶಾಂತಿನಗರ, ಶಿವಾಜಿನಗರ, ವಸಂತನಗರ, ನೀಲಸಂದ್ರ ಬಡವಾಣೆಯ ಜನರು ಆತಂಕದಲ್ಲಿದ್ದಾರೆ. ಇವಿಷ್ಟು ನಗರಗಳು ದಕ್ಷಿಣ ಪೂರ್ವ ವಲಯದಲ್ಲಿದ್ದು, ಲಾಕ್‍ಡೌನ್ ಬಿಗಿ ಗೊಳಿಸಲಾಗಿದೆ. 227 ರಸ್ತೆಗಳನ್ನು ಕಂಪ್ಲೀಟ್ ಬಂದ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ