ಕೋವಿಡ್-19 ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಪಾಲಿಕೆ ಸದಸ್ಯೆ ಪತಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಒಂದೆಡೆ ಕೊರೊನಾ ವೈರಸ್ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಸುಳ್ಳು ಸುದ್ದಿಗಳು ಕೂಡ ಅಷ್ಟೇ ಜೋರಾಗಿ ಹಬ್ಬುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಪಾಲಿಕೆ ಸದಸ್ಯರ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಿಬಿಎಂಪಿಯ ಚೌಡೇಶ್ವರಿ ವಾರ್ಡ್-2ರ ಕಾಪೋರೇಟರ್ ಪದ್ಮಾವತಿ ಅವರ ಪತಿ ಯಲಹಂಕ ನಗರಸಭೆ ಮಾಜಿ ಸದಸ್ಯ ಅಮರ್​ನಾಥ್ ಯಲಹಂಕದಲ್ಲಿ ನೆಲೆಸಿರುವ ವ್ಯಕ್ತಿಗೆ ಕರೊನಾ ಸೋಂಕು ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿ ಬಿಟ್ಟಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕೊರೊನಾದ ಬಗ್ಗೆ ವದಂತಿ ಹಬ್ಬಿಸಿದ ಆರೋಪದ ಮೇಲೆ ಅಮರ​ನಾಥ್​ರನ್ನ ಐಪಿಸಿ ಸೆಕ್ಷನ್ 153, 188, 504 ಅಡಿಯಲ್ಲಿ ಬಂಧಿಸಲಾಗಿದೆ.

ಅಮರನಾಥ್ ಕೊಂಡಪ್ಪ ಲೇಔಟ್​ನಲ್ಲಿ ಮೊದಲ ಕರೊನಾ ಪಾಸಿಟಿವ್ ಕೇಸ್ ಎಂದು ತೆಲುಗಿನಲ್ಲಿ ಸುಳ್ಳು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ. ಈ ಸುಳ್ಳು ವದಂತಿಯಿಂದಾಗಿ ಆಂಧ್ರ ಹಾಗೂ ತೆಲಂಗಾಣದ ಕೂಲಿ ಕಾರ್ವಿುಕರು ಭಯಭೀತರಾಗಿ ಊರಿಗೆ ಹೋಗಲು ತಂಡೋಪತಂಡವಾಗಿ ಕೋಗಿಲು ಕ್ರಾಸ್ ಬಸ್ ನಿಲ್ದಾಣದ ಬಳಿ ಬಂದಿರುವುದನ್ನು ಕಂಡ ಪೊಲೀಸರು ವಿಚಾರಿಸಿದಾಗ ಅಮರನಾಥನ ಸುಳ್ಳು ಸುದ್ದಿಯ ವಿಚಾರ ಬಯಲಾಗಿದೆ.

ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ತಪ್ಪು ಸಂದೇಶ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಯಲಹಂಕ ನಗರಸಭೆ ಮಾಜಿ ಸದಸ್ಯ ಅಮರ್​ನಾಥ್ ಅವರನ್ನು ಬಂಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button