Latest

ಸಂತ್ರಸ್ತ ಯುವತಿಯೇ ವೇಶ್ಯಾವಾಟಿಕೆ ದಂಧೆ ಕಿಂಗ್ ಪಿನ್…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಬಗೆದಷ್ಟು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಯುವತಿ ಹಾಗೂ ಆಕೆಯ ಗ್ಯಾಂಗ್ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.

ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಸಂತ್ರಸ್ತ ಯುವತಿಯನ್ನು ಕೇರಳದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರಲಾಗಿದೆ. ಆರೋಪಿಗಳು ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

Home add -Advt

ಬಾಂಗ್ಲಾದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದರಲ್ಲದೇ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಗ್ಯಾಂಗ್ ಬೀಡುಬಿಟ್ಟಿತ್ತು. ಸಂತ್ರಸ್ತ ಯುವತಿಯೇ ಯುವಕರ ಗ್ಯಾಂಗ್ ನ್ನು ಕಟ್ಟಿದ್ದಳು. ಎಲ್ಲರೂ ಸೇರಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಹಣದ ವಿಷಯವಾಗಿ ಸಂತ್ರಸ್ತ ಯುವತಿಯೊಂದಿಗೆ ಜಗಳವಾಗಿ ಧ್ವೇಷದಿಂದ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ ಮೆ 19ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ಹಾಗೂ ಆಕೆಯ ಇನ್ನೊಂದು ಗುಂಪು ಬೆಂಗಳೂರು ಮಾತ್ರವಲ್ಲ ಕೇರಳ ಹಾಗೂ ಹೈದರಾಬಾದ್ ನಲ್ಲೂ ಸ್ಪಾ ನಡೆಸುತ್ತಾ ವೇಶ್ಯಾವಾಟಿಕೆ ದಂಧೆ ನಡೆಸುತ್ತಿತ್ತು. ಮೇ 19ರಂದು ಹಣದ ವಿಚಾರವಾಗಿ ಮಾತುಕತೆಗೆ ಹೈದರಾಬಾದ್ ನಿಂದ ಯುವತಿಯನ್ನು ಬೆಂಗಳೂರುಗೆ ಕರೆಸಿಕೊಂಡ ಯುವಕರು ತಮಗೆ ಕೊಡಬೇಕಿದ್ದ ಹಣ ಕೊಟ್ಟು ಸೆಟಲ್ ಮೆಂಟ್ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಗಲಾಟೆ ನಡೆದಿದ್ದು, ಮನೆಯಲ್ಲಿಯೇ ಯುವತಿಯನ್ನು ಕೂಡಿಟ್ಟು ಚಿತ್ರಹಿಂಸೆ ನೀಡಿ ಗ್ಯಾಂಗ್ ರೇಪ್ ಮಾಡಿದ್ದಲ್ಲದೇ ವಿಡಿಯೋ ಚಿತ್ರೀಕರಿಸಿ ಹೈದರಾಬಾದ್ ನ ಆಕೆಯ ಕಡೆಯವರಿಗೆ ಕಳುಹಿಸಿದ್ದಾರೆ. ಯುವತಿಯ ಕಡೆಯವರು ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ಗಲಾಟೆಯಾಗುತ್ತಿದ್ದಂತೆ ರಾಮಮೂರ್ತಿನಗರದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಗ್ಯಾಂಗ್ ರೇಪ್ ಪ್ರಕರಣ; 6 ಜನರ ಬಂಧನ

Related Articles

Back to top button