Latest

ಬಾಡಿ ಬಿಲ್ಡರ್ ನಿಂದ ಯುವತಿ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಾನೀಯದಲ್ಲಿ ಡ್ರಗ್ ಮಿಶ್ರಣ ಮಾಡಿ ಯುವತಿ ಮೇಲೆ ಬಾಡಿ ಬಿಲ್ಡರ್ ಅತ್ಯಾಚಾರ ನಡೆಸಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಅಂತರಾಷ್ಟ್ರೀಯ ಸ್ಪರ್ಧೆ ಬಾಡಿ ಬಿಲ್ಡರ್, ಜಿಮ್ ಟ್ರೇನರ್ ಆಗಿರುವ ಸೈಯದ್ ಸಿದ್ದಕಿ ಸಾಮಾಜಿಕ ಜಾಲತಾಣಗಳಲ್ಲಿ 23 ವರ್ಷದ ಯುವತಿಗೆ ಪರಿಚಯನಾಗಿದ್ದು, ಆತನ ಬಳಿ ಬಾಡಿ ಬಿಲ್ಡರ್ ಟ್ರೇನಿಂಗ್ ಪಡೆಯಲೆಂದು ಯುವತಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು.

ಬಾಡಿ ಬಿಲ್ಡ್ ಮಾಡಲು ಸ್ಟಿರಾಯ್ಡ್ ತೆಗೆದುಕೊಳ್ಳುವಂತೆ ಸೈಯದ್ ಒತ್ತಾಯಿಸಿದ್ದ. ಆದರೆ ಯುವತಿ ನಿರಾಕರಿಸಿದ್ದಳು. ಸಹಜವಾಗಿ ಬಾಡಿ ಬಿಲ್ಡ್ ಮಾಡಿ ಟ್ರೇನಿಂಗ್ ಪಡೆದು ಮತ್ತೆ ಮುಂಬೈಗೆ ಹೋಗಬೇಕು ಎಂದು ಯುವತಿ ಹೇಳಿದ್ದಳು. ಆದರೆ ಯುವತಿಗೆ ಪಾನೀಯದಲ್ಲಿ ಡ್ರಗ್ ಬೆರೆಸಿ ಆಕೆಯ ಮೇಳೆ ಸೈಯದ್ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಅಲ್ಲದೇ ಆಕೆಯನ್ನು ಮದುವೆಯಾಗುವುದಾಗಿಯೂ ಹೇಳಿ ನಂಬಿಸಿ ಮತ್ತೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತ ಯುವತಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Home add -Advt

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜಿಮ್ ಟ್ರೇನರ್, ಬಾಡಿ ಬಿಲ್ಡರ್ ಸೈಯದ್ ಸಿದ್ದಕಿಯನ್ನು ಬಂಧಿಸಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರ ವಿರುದ್ಧ FIR ದಾಖಲು

Related Articles

Back to top button