ಪತ್ನಿ ಸುಂದರವಾಗಿಲ್ಲ ಎಂದು ವಿಚ್ಛೇದನಕ್ಕೆ ಮುಂದಾದ ಪತಿ ಮಹಾಶಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮದುವೆಯಾದ 6 ತಿಂಗಳ ಬಳಿಕ ಪತಿ ಮಹಾಶಯನಿಗೆ ತನ್ನ ಪತ್ನಿ ಸುಂದರವಾಗಿಲ್ಲ ಎನಿಸಲು ಆರಂಭವಾಗಿದೆ. ಈ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವ ಪತಿ, ಪತ್ನಿ ಡಿವೋರ್ಸ್ ಗೆ ಸಹಿಹಾಕಿಲ್ಲ ಎಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಾರೇನಹಳ್ಳಿ ನಿವಾಸಿ ಶಶಿಕುಮಾರ್ ಹಾಗೂ ವಿಜಯಲಕ್ಷ್ಮೀ 6 ತಿಂಗಳ ಹಿಂದೆ ವಿವಾಹವಾಗಿ ಚೆನ್ನಾಗಿಯೇ ಇದ್ದರು. ಆದರೆ ಇತ್ತೀಚೆಗೆ ಶಶಿಕುಮಾರ್ ಗೆ ಅದೇನಾಯ್ತು ಗೊತ್ತಿಲ್ಲ ತನ್ನ ವರಸೆ ಬದಲಿಸಿದ್ದಾನೆ. ಪತ್ನಿಗೆ ನೀನು ನೋಡೊದಕ್ಕೆ ಸುಂದರವಾಗಿಲ್ಲ. ನನಗೆ ನಿನ್ನ ಜೊತೆ ಬಾಳೋದಕ್ಕೆ ಇಷ್ಟ ಇಲ್ಲ. ನಾನು ಬೇರೆ ವಿವಾಹವಾಗಬೇಕೆಂದು ನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.

ಪತಿ ಹಿಂಸೆ ತಾಳಲಾರದೇ ಪತ್ನಿ ತವರು ಮನೆ ಸೇರಿದ್ದಾಳೆ. ಇಬ್ಬರನ್ನು ಕರೆಸಿ ಪೋಷಕರು ರಾಜಿ ಸಂದಾನ ಮಾಡಿದ್ದಾರೆ. ಆದರೆ ಶಶಿಕುಮಾರ್ ಪತ್ನಿಗೆ ವಿಷಯ ತಿಳಿಯದಂತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಲ್ಲದೆ ಬಲವಂತವಾಗಿ ಪತ್ನಿ ಬಳಿ ಸಹಿ ಹಾಕುವಂತೆ ಒತ್ತಾಯಿದ್ದಾನೆ. ಪತ್ನಿ ಸಹಿ ಮಾಡಲು ನಿರಾಕರಿಸಿದ್ದಕ್ಕೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪತಿ ಶಶಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button