Latest

*BREAKING: ಕಾಲೇಜು ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿ; ಅನುಮಾನಾಸ್ಪದವಾಗಿ ಸಾವು*

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕಾಲೇಜೊಂದರಲ್ಲಿ ಅವಘಡ ಸಂಭವಿಸಿದ್ದು, ಕಾನೂನು ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ಕಟ್ಟಡದ ಮೇಲಿಂದ ಜಿಗಿದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

23 ವರ್ಷದ ಲಾ ಸ್ಟುಡೆಂಟ್ ವಾಣಿ ಮೃತ ವಿದ್ಯಾರ್ಥಿನಿ. ಬೆಂಗಳೂರಿನ ವಿ.ವಿ.ಪುರಂ ನಲ್ಲಿರುವ ಇನ್ಸ್ ಟಿ ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೊದಲ ವರ್ಷದ ಎಲ್ ಎಲ್ ಬಿ ಓದುತ್ತಿದ್ದ ವಾಣಿ ಇದೀಗ ಏಕಾಏಕಿ ಕಾಲೇಜಿನ ಕಟ್ಟಡದ ಮೇಲಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ.

Home add -Advt

ಕಾಲೇಜಿನ 6 ನೇ ಮಹಡಿಯಿಂದ ವಿದ್ಯಾರ್ಥಿನಿ ವಾಣಿ ಜಿಗಿದಿರುವ ಶಂಕೆ ವ್ಯಕ್ತವಾಗಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

News Update:

ಕಾನೂನು ವಿದ್ಯಾರ್ಥಿನಿಯ ಸಾವು  ಆತ್ಮಹತ್ಯೆ ಎನ್ನುವುದು ಖಚಿತವಾಗಿದೆ. ವಿದ್ಯಾರ್ಥಿನಿಯ ಡೆತ್ ನೋಟ್ ಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

*BREAKING: ಶಿಕ್ಷಕನಿಂದ ಮನಬಂದಂತೆ ಹಲ್ಲೆ; ವಿದ್ಯಾರ್ಥಿ ದಾರುಣ ಸಾವು*

https://pragati.taskdun.com/teacherattackstudentdeathlady-teachergadaga-school/

Related Articles

Back to top button