Latest

ಚಾಲಕನ ನಿಯಂತ್ರಣ ತಪ್ಪಿ ಟೋಲ್ ನಲ್ಲಿ ಸಂಭವಿಸಿತು ಭೀಕರ ಅಪಘಾತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಟೋಲ್ ಸಿಬ್ಬಂದಿ ಕೈತೊಳೆಯುತ್ತಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್‍ನಲ್ಲಿ ನಡೆದಿದೆ.

ಗೋಪಾಲ್ ಮೃತ ದುರ್ದೈವಿ. ಭೀಕರ ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಾರಿ ಮುಂದಿನ ಮಂದಿನ ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Home add -Advt

ನವಯುಗ ಟೋಲ್ ನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೆ ನುಗ್ಗಿದೆ. ಇದೇ ವೇಳೆ ಟೋಲ್ ನ ಕಂಟ್ರೋಲ್ ರೂಂ ನಲ್ಲಿ ಸಿಬ್ಬಂದಿ ಗೋಪಾಲ್ ಕೈತೊಳೆಯುತ್ತಿದ್ದರು. ವೇಗವಾಗಿ ಬಂದ ಲಾರಿ ಗೋಪಾಲ್ ಅವರನ್ನು ಎಳೆದೊಯ್ದ ಪರಿಣಾಮ ಗೋಡೆಗೆ ಗುದ್ದಿದ್ದಾರೆ. ಗೋದೆ ಹಾಗೂ ಲಾರಿ ನಡುವೆ ಸಿಕ್ಕಿಹಾಕಿಕೊಂಡ ಗೋಪಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಲಾರಿ ಮುಂದಿದ್ದ ಕಾರಿಗೂ ಗುದ್ದಿದೆ. ಸಧ್ಯ ಕಾರಿನಲ್ಲಿದ್ದ ಚಾಲಕ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button