ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾ ದೇಶದಲ್ಲಿ ರಾಜಕೀಯ ಬಿಕ್ಕಟ್ಟು, ಪ್ರತಿಭಟನೆಗಳು, ದಾಳಿ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ಗಾರ್ಮೆಂಟ್ಸ್ ಉದ್ಯಮಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಅಲ್ಲಿನ ಸಿದ್ಧವಸ್ತುಗಳನ್ನು ಆಮದಿ ಮಾಡಿಕೊಳ್ಳಲು ಕರ್ನಾಟಕದ ವ್ಯಾಪಾರಸ್ತರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜೀನ್ಸ್ ಗೆ ಬೇಡಿಕೆ ಹೆಚ್ಚಾಗಿದೆ.
ಬಳ್ಳಾರಿ ಜೀನ್ಸ್ ಉದ್ಯಮದಲ್ಲಿ ಹೊಸ ಆಶಾಕಿರಣ ಮೂಡಿದೆ. ಬಾಂಗ್ಲಾದಿಂದ ಕಡಿಮೆ ಬೆಲೆಗೆ ಜೀನ್ಸ್ ತರಿಸಿಕೊಳ್ಳುತ್ತಿದ್ದ ಬೆಂಗಳೂರು ವ್ಯಾಪಾರಸ್ತರು ಇದೀಗ ಬಳ್ಳಾರಿ ಜೀನ್ಸ್ ನತ್ತ ಮುಖ ಮಾಡಿದ್ದಾರೆ. ಬಾಂಗ್ಲಾದಲ್ಲಿ ಬಿಕ್ಕಟ್ಟು ಉಲಭಣಗೊಳ್ಳುತ್ತಿದ್ದಂತ್ತೆ ಅಲ್ಲಿನ ಸಿದ್ಧ ಉಡುಪು, ಜೀನ್ಸ್ ಆಮದು ಮಾಡಿಕೊಳ್ಳಲು ವ್ಯಾಪಾರಸ್ತರು ಹಿಂದೆತು ಹಾಕುತ್ತಿದ್ದಾರೆ. ಇದು ರಾಜ್ಯದಲ್ಲಿಯೇತಯಾರಾಗುವ ಬಳ್ಳಾರಿ ಜೀನ್ಸ್ ಬಟ್ಟೆ ವ್ಯಾಪಾರಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.
ಸಿದ್ಧ ಉದುಪು ರಫ್ತುದಾರ ದೇಶಗಳ ಪೈಕಿ ಬಾಂಗ್ಲಾದೇಶ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಅಲ್ಲಿನ ಜೀನ್ಸ್ ಬಟ್ಟೆಗೆ ಜಗತ್ತಿನ್ನೆಲೆಡೆ ಬೇಡಿಕೆ ಹೆಚ್ಚು. ಆದರೆ ರಾಜಕೀಯ ಬಿಕ್ಕಟ್ಟು ಅಲ್ಲಿನ ಜೀನ್ಸ್ ಉದ್ಯಮಕ್ಕೆ ಹೊಡೆತ ಬೀಳುವಂತೆ ಮಾಡಿದೆ. ಬಾಂಗ್ಲಾ ಜೀನ್ಸ್ ಹಾಗೂ ಬಳ್ಳಾರಿ ಜೀನ್ಸ್ ಬಟ್ಟೆಗೂ ಗುಣಮಟ್ಟ ಬಹುತೇಕ ಹೋಲಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಗಟು ಮಾರಾಟಗಾರರು ಬಳ್ಳಾರಿ ಜೀನ್ಸ್ ನತ್ತ ಆಸಕ್ತಿ ಹೊಂದಿದ್ದು, ಕಳೆದ ಮೂರು ತಿಂಗಳಲ್ಲಿ ಬಳ್ಳಾರಿ ಜೀನ್ಸ್ ಗೆ ಶೇ.30ರಷ್ಟು ವ್ಯಾಪಾರ ಹೆಚ್ಚಾಗಿದೆ.
ಈ ಬಗ್ಗೆ ಪೋಲಾಕ್ಸ್ ಜೀನ್ಸ್ ಮಾಲೀಕ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದು, ಕೆಲ ತಿಂಗಳಿಂದ ಬಳ್ಳಾರಿ ಜೀನ್ಸ್ ವ್ಯಾಪಾರದಲ್ಲಿ ಬೆಳವಣಿಗೆಯಾಗಿದೆ. ಸಗಟು ಮಾರಾಟಗಾರರು ಬಳ್ಳಾರಿ ಜೀನ್ಸ್ ನತ್ತ ಮುಖಮಾಡಿದ್ದಾಗಿ ತಿಳಿಸಿದ್ದಾರೆ.
ಬಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು, ಅಲ್ಪಾಸಂಖ್ಯಾತರ ಮೇಲಿನ ದಾಳಿಯಿಮ್ದಾಗಿ ಅಲ್ಲಿನ ಉದ್ಯಮ, ಗಾರ್ಮೆಂಟ್ಸ್ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ನಮ್ಮ ದೇಶ ಹಾಗೂ ರಾಜ್ಯದ ವ್ಯಾಪಾರಸ್ತರು ಅಲ್ಲಿನ ವಸ್ತು ಆಮದು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿನ ಜೀನ್ಸ್ ವಹಿವಾಟಿನಲ್ಲಿ ಪ್ರಗತಿಯಾಗಬಹುದು ಎಂದು ಜೀನ್ಸ್ ಡೈಯಿಂಗ್ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿ ಹೊರವಯದ ಮುಂಡ್ರಿಗಿಯಲ್ಲಿ ಜೀನ್ಸ್ ಬಟ್ಟೆಗಳ ತಯಾರಿಕೆ ಘಟಕಗಳಿವೆ. ಬಳ್ಳಾರಿಯಲ್ಲಿ 500 ಘಟಕಗಳಿದ್ದು, ಪ್ರತಿದಿನ 2 ಲಕ್ಷ ಜೀನ್ಸ್ ಉತ್ಪನ್ನಗಳು ತಯಾರಾಗುತ್ತವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ