Latest

ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಆಯ್ಕೆ ಪರೀಕ್ಷೆಗಳಿಗೆ ತಡೆ – ಕೇಂದ್ರದ ಮಹತ್ವದ ನಿರ್ಧಾರ

 ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸುವ ಕುರಿತು ಸಮಿತಿ ರಚಿಸಲು ನಿರ್ಧರಿಸಿರುವ ಕೇಂದ್ರ ಸರಕಾರ ಸಮಿತಿಯ ವರದಿ ಬರುವವರೆಗೆ ಎಲ್ಲ ಆಯ್ಕೆ ಪರೀಕ್ಷೆಗಳನ್ನು ತಡೆಹಿಡಿಯಲು ನಿರ್ಧರಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಭಾಷೆಗಳಲ್ಲಿಯೇ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವ ಕುರಿತು ಮಂಗಳವಾರ  ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಜೊತೆಗೆ ಚರ್ಚಿಸಲಾಗಿದ್ದು, ಈ ಕುರಿತು ಒಂದು ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ. ಸಮಿತಿಯ ವರದಿ ಬರುವವರೆಗೆ ಆಯ್ಕೆ ಪರೀಕ್ಷೆಗಳನ್ನು ತಡೆಹಿಡಿಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು  ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈಗಾಗಲೆ ಪ್ರಾದೇಶಿಕ ಮತ್ತು ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈಗ ರಚಿಸಲಾಗುವ ಸಮಿತಿ ರಾಷ್ಟ್ರೀಯ ಬ್ಯಾಂಕ್ ಪರೀಕ್ಷೆಗಳ ಕುರಿತು ಅಭಿಪ್ರಾಯ ತಿಳಿಸಲಿದೆ.

6 ರಾಜ್ಯಗಳ ಸಿಎಂ ಜೊತೆ ಶುಕ್ರವಾರ ಮೋದಿ ಮಹತ್ವದ ಸಭೆ: ಲಾಕ್ ಡೌನ್ ಬಗ್ಗೆ ಅಂದೇ ತೀರ್ಮಾನ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button