ಪ್ರಗತಿವಾಹಿನಿ ಸುದ್ದಿ; ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಡ್ಜ್ ಮ್ಯಾನೇಜರ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಎಸ್.ಪಿ ರಿಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಆರೋಪಿಗಳು ಸಂತ್ರಸ್ತ ಬಾಲಕಿಗೆ ಮೊದಲೇ ಪರಿಚಿತರಾಗಿದ್ದರು. ಇಬ್ಬರು ಆರೋಪಿಗಳು ಹಾಗೂ ಬಾಲಕಿ ನಡುವೆ ಸೋಷಿಯಲ್ ಮೀಡಿಯಾ ಮೂಲಕ ಕೆಲ ಅಶ್ಲೀಲ ಚಾಟಿಂಗ್ ಕೂಡ ನಡೆದಿದೆ. ಅ.8ರಂದು ಬಾಲಕಿಯನ್ನು ಆರೋಪಿಗಳು ಮಂಗಳೂರಿಗೆ ಕರೆಸಿಕೊಂಡು ಮಾಲ್ ಸುತ್ತಾಡಿದ್ದಾರೆ. ಬಳಿಕ ಆಕೆಯನ್ನು ಪುಸಲಾಯಿಸಿ ಸ್ವಲ್ಪಹೊತ್ತು ರೆಸ್ಟ್ ಮಾಡೋಣವೆಂದು ಲಾಡ್ಜ್ ಗೆ ಕರೆದೊಯ್ದಿದ್ದಾರೆ.
ಲಾಡ್ಜ್ ನಲ್ಲಿ ಬಾಲಕಿ ಮೇಲೆ ಮೊದಲು ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಲಾಡ್ಜ್ ಮ್ಯಾನೇಜ್ ರ್ ಕೂಡ ಅತ್ಯಾಚಾರವೆಸಗಿದ್ದಾನೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಬಂಧಿತರಲ್ಲಿ ಇಬ್ಬರು ಉಡುಪಿ ಜಿಲ್ಲೆಯ ಕಾಪು ನಿವಾಸಿಗಳಾಗಿದ್ದರೆ, ಓರ್ವ ದಾವಣಗೆರೆ ಮೂಲದವನು ಹಾಗೂ ಇನ್ನೋರ್ವ ಆರೋಪಿ ಕುಂದಾಪುರದ ಲಾಡ್ಜ್ ಮ್ಯಾನೇಜರ್. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈರುಳ್ಳಿ ವ್ಯಾಪಾರಿ ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ನಿರ್ಮಾಪಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ